Friday, July 5, 2024

ಶಾಲ ಮಕ್ಕಳಿಗೆ ಸಿಹಿಸುದ್ದಿ: 8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ!

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ. ಈ ಬಗೆಗಿನ ಪ್ರಸ್ತಾವವನ್ನು ಇಲಾಖೆಯು ತನ್ನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಿದೆ.

ಈ ವರ್ಷದಿಂದ CBSE ಶಾಲೆಗಳಲ್ಲಿ 9ರಿಂದ 12ನೇ ತರಗತಿಯ ತನಕ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಪ್ರಸ್ತಾವನೆ ಚರ್ಚೆಯಲ್ಲಿದೆ. ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರಿಸಿ, ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಉತ್ತರಿಸಲು ಅವಕಾಶ ನೀಡಬೇಕು ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಹೈಸ್ಕೂಲ್ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಏಳು ದಿನ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಓಪನ್ ಬುಕ್ ಎಕ್ಸಾಂ ಇದ್ದಾಗ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಪಠ್ಯ, ನೋಟ್ ಬುಕ್ ಮತ್ತು ಸಂಬಂಧಿತ ರೆಫರೆನ್ಸ್ ಬುಕ್‌ಗಳಲ್ಲಿ ಯಾವ ವಿಷಯ ಎಲ್ಲಿದೆ ಅದರ ಬಳಕೆ ಹೇಗೆ ಎಂಬ ಸ್ಪಷ್ಟ ಅರಿವು ಅವರಿಗೆ ಇರಬೇಕಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಪಠ್ಯ ಓದುವ ಮನೋಭಾವವನ್ನು ಹೆಚ್ಚಿಸಲು ತೆರೆದ ಪುಸ್ತಕ ಪರೀಕ್ಷೆ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ ಎಂದು ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಾಜಿ ಎಸ್.ಕರಿಚಣ್ಣವರ ಹೇಳುತ್ತಾರೆ.

RELATED ARTICLES

Related Articles

TRENDING ARTICLES