Sunday, September 8, 2024

ದೇಗುಲದ 2 ಗಂಟೆ ಕದ್ದೊಯ್ದ ಕಳ್ಳ!: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರಕನ್ನಡ: ಜಗತ್ತಿನಲ್ಲಿ ಎಂಥೆಂಥಾ ಕಳ್ಳರು ಇರ್ತಾರೆ ನೋಡಿ. ಇಲ್ಲೊಬ್ಬ ಐನಾತಿ ಕಳ್ಳ ದೇವಸ್ಥಾನದ ಗಂಟೆಗಳನ್ನ ಎಗರಿಸಿದ್ದಾರೆ. ಇಂಥದ್ದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಜೋಡಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ನಡೆದಿದೆ.

ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ, ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲೇ ಕುಳಿತಿದ್ದ. ಜನರ ಓಡಾಟ ಇಲ್ಲದೇ ಇರೋದನ್ನ ಗಮನಿಸಿ ಆ ಬಳಿಕ ದೇವಾಲಯದಲ್ಲಿ ಅಳವಡಿಸಿದ್ದ 2 ಘಂಟೆಗಳನ್ನ ಕದ್ದು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಸುಮಾರು 1 ತಾಸು ಕಳೆದ ಬಳಿಕ ಆಡಳಿತ ಮಂಡಳಿ ಘಂಟೆಗಳ ನಾಪತ್ತೆ ಬಗ್ಗೆ ಗಮನಿಸಿದೆ. ಆ ಬಳಿಕ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪಂಜುರ್ಲಿ ದೈವದ ಪವಾಡ: ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿ

ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ದೂರು ದಾಖಲಿಸಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES