Monday, July 8, 2024

ಪೆನ್​ ಡ್ರೈವ್​ ಪ್ರಕರಣ: ಪ್ರಜ್ವಲ್​ ಬಳಸುತ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಕೊಂಡೊಯ್ದ ಅಧಿಕಾರಿಗಳು

ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ರೂವಾರಿ ಪ್ರಜ್ವಲ್​ ರೇವಣ್ಣ ವಿದೇಶದಿಂದ ಮೇ 31 ರಂದು ದೇಶಕ್ಕೆ ವಾಪಾಸ್ಸಾಗಿ SIT ತನಿಖೆಗೆ ಸಹಕರಿಸುವುದಾಗಿ ತಿಳಿಸಿದ ಬೆನ್ನಲ್ಲೇ ಪ್ರಜ್ವಲ್​ ಗೆ ಸಂಬಂಧಿಸಿದ ಮಹತ್ವದ ದಾಖಲೆ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ.

ಹಾಸನದ ಆರ್.ಸಿ. ರಸ್ತೆಯಲ್ಲಿರುವ ಸಂಸದ ಪ್ರಜ್ವಲ್​ ನಿವಾಸದಲ್ಲಿ ಸತತ 10 ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿದ್ದು, ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಉಡುಪು ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ಕೊಂಡೊಯ್ದರು. ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಎಸ್‌ಐಟಿ ತಂಡ ಹೊರಟಿದೆ. ಕಾರ್ಯಾಚರಣೆ ವೇಳೆ ಹಾಸನ ನಗರ ಠಾಣೆ ಪೊಲೀಸರು ಎಸ್‌ಐಟಿಗೆ ಸಹಾಯ ಮಾಡಿದರು.

ಇದನ್ನೂ ಓದಿ: ಭಾರತಕ್ಕೆ ಬರಲು ಪ್ರಜ್ವಲ್ ವಿಮಾನ ಟಿಕೆಟ್ ಬುಕ್

ಅಶ್ಲೀಲ ವೀಡಿಯೋಗಳಿದ್ದ ಪೆನ್‌ಡ್ರೈವ್‌ ಹಂಚಿದ ಪ್ರಕಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಾದ ನವೀನ್‌ಗೌಡ ಹಾಗೂ ಚೇತನ್ ಅವರು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ನಿನ್ನೆ ರಾತ್ರಿಯೇ ಹಾಸನಕ್ಕೆ ಕರೆತಂದಿದ್ದಾರೆ.

RELATED ARTICLES

Related Articles

TRENDING ARTICLES