Monday, July 8, 2024

ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ: 31ರಂದು ದೇಶಕ್ಕೆ ವಾಪಾಸ್​

ಬೆಂಗಳೂರು: ಬರೊಬ್ಬರಿ ಒಂದು ತಿಂಗಳ ಬಳಿಕ ಅಶ್ಲೀಲ ವೀಡಿಯೋಗಳ ರೂವಾರಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪ್ರತ್ಯಕ್ಷವಾಗಿದ್ದು ತಂದೆ, ತಾಯಿ, ತಾತನಿಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ವಿದೇಶದಿಂದ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ಪ್ರಜ್ವಲ್​ ರೇವಣ್ಣ, ನನ್ನ ತಾತಾ, ನನ್ನ ತಂದೆ-ತಾಯಿ, ಕುಮಾರಣ್ಣಗೆ ರಾಜ್ಯದ ಜನತೆಗೆ, ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ. ನಾನು ಎಲೆಕ್ಷನ್‌ ಮುಗಿದ ಬಳಿಕ ಫಾರಿನ್‌ಗೆ ಹೋಗೋದು ಮೊದಲೇ ಫಿಕ್ಸ್ ಆಗಿತ್ತು, ನಾನು ಫಾರಿನ್‌ಗೆ ಹೋದ ಬಳಿಕ ಯೂಟ್ಯೂಬ್‌ ಮೂಲಕ ನಂಗೆ ವಿಷಯ ಗೊತ್ತಾಯ್ತು, ಈ ಎಲ್ಲಾ ಬೆಳವಣಿಗೆಗಳನ್ನ ನೋಡಿ ನಾನು ಆಘಾತಕ್ಕೊಳಗಾದೆ, ಹೀಗಾಗಿ ನಾನು ಅನಾರೋಗ್ಯಕ್ಕೀಡಾಗಿ ಐಸೋಲೇಷನ್‌ಗೆ ಹೋದೆ, ಭಾರತಕ್ಕೆ ಆಗಮಿಸಿ ಎಸ್‌ಐಟಿ ಮುಂದೆ ಹಾಜರಾಗುವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪೆನ್​ಡ್ರೈವ್​ ಪ್ರಕರಣ: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ 1 ತಿಂಗಳು

ಹಾಸನದಲ್ಲಿ ಕೆಲವೊಂದು ಶಕ್ತಿಗಳು ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ಮಾಡುತ್ತಿದ್ದಾರೆ,  ನನ್ನ ರಾಜಕೀಯ ಬೆಳವಣಿಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ ರಾಜಕೀಯವಾಗಿ ನನ್ನನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಇದೇ ಮೇ 31 ರಂದು ಶುಕ್ರವಾರ ನಾನು SIT ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಲಿದ್ದೇನೆ, SIT ಗೆ ಸಹಕರಿಸುತ್ತೇನೆ ಎಂದು ಈ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES