Sunday, September 8, 2024

ಉಡುಪಿ ಗ್ಯಾಂಗ್ ವಾರ್ ಪ್ರಕರಣ: ಮತ್ತೆ ಮೂವರ ಬಂಧನ

ಉಡುಪಿ: ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ19ರಂದು ನಸುಕಿನ ವೇಳೆ ನಡುರಸ್ತೆಯಲ್ಲಿಯೇ ಗರುಡ ಗ್ಯಾಂಗ್ ಮಧ್ಯೆ ಗ್ಯಾಂಗ್​ವಾರ್ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಗರುಡ ಗ್ಯಾಂಗ್​​​ನ ಮಜೀದ್, ಅಲ್ಪಾಝ್, ಶರೀಫ್ ಬಂಧಿಸಲಾಗಿದೆ.

ಘಟನೆ ಸಂಬಂಧ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್, ರಾಕೀಬ್ ಹಾಗೂ ಮೇ 25ರಂದು ಸಕ್ಲೇನ್​​ ಎಂಬುವರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:Rave Party: ನಟಿ ಹೇಮಾಗೆ ನೋಟಿಸ್​​​, ಸಿಸಿಬಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

ಗರುಡ ಗ್ಯಾಂಗ್​ ವಾರ್​ಗೆ ಕಾರಣ ರಾಜ್ಯದಲ್ಲಿನ ಬ್ರದರ್​ ಸರ್ಕಾರ:

ಗ್ಯಾಂಗ್​ ವಾರ್ ಕುರಿತು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ​ ಪ್ರತಿಕ್ರಿಯೆ ನೀಡಿದರು. ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಸಾಮಾನ್ಯರು ಮಾಡಿದಂತೆ ಇಲ್ಲ, ಮಾದಕವಸ್ತುಗಳು ಸೇವನೆ ಮಾಡಿವರಿಂದ ಮಾತ್ರ ಇಂಥ ಕೃತ್ಯದಲ್ಲಿ ಭಾಗಿಯಾಗಲು ಸಾಧ್ಯ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದರು.

ಉಡುಪಿಯಲ್ಲಿ ಇಂಥ ಘಟನೆಗಳು ನಡೆಯಲು ಕಾರಣ ರಾಜ್ಯದಲ್ಲಿ ಇವರ ಬ್ರದರ್ಸ್​ ಸರ್ಕಾರ ಇರೋದ್ರಿಂದಲೇ. ಈ ಗರುಡ ಎಂಬ ಸಂಘಟನೆ, ಮೂಲಭೂತವಾದಿಗಳು ಎಲ್ಲರನ್ನು ತನಿಖೆಗೆ ಒಳಪಡಿಸಬೇಕು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES