Sunday, September 8, 2024

ಬರ್ತ್​ಡೇ ಬಾಯ್ ಸುನಿಲ್ ನರೈನ್ KKRಗೆ ಟ್ರೋಫಿ ಗೆಲ್ಲಿಸಿಕೊಡುತ್ತಾರಾ?

ಬೆಂಗಳೂರು : ಇಂದು ಕೆಕೆಆರ್​ ಸ್ಟಾರ್ ಆಲ್​ರೌಂಡರ್ ಸುನಿಲ್ ನರೈನ್ ಅವರ ಹುಟ್ಟುಹಬ್ಬ. ಅವರ ಜನ್ಮದಿನದಂದೇ ಐಪಿಎಲ್​-2024ರ ಫೈನಲ್ ಪಂದ್ಯ ನಡೆಯುತ್ತಿದೆ.

ಸುನಿಲ್ ನರೈನ್ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಲಿ. ಆ ಮೂಲಕ ಕೆಕೆಆರ್ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಈ ಬಾರಿಯ ಆವೃತ್ತಿಯಲ್ಲಿ ಸುನಿಲ್ ನರೈನ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. 13 ಪಂದ್ಯಗಳನ್ನು ಆಡಿರುವ ಅವರು, 482 ರನ್​ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಇರುವುದು ಗಮನಾರ್ಹ. ಮತ್ತೊಂದೆಡೆ, ಬೌಲಿಂಗ್​ನಲ್ಲೂ 16 ವಿಕೆಟ್ ಕಬಳಿಸಿದ್ದಾರೆ.

ಕೆಕೆಆರ್​ ಚಾಂಪಿಯನ್ ಎಂದ ಹೇಡನ್

ಈ ವರ್ಷ ಕೆಕೆಆರ್​ ಐಪಿಎಲ್ ಚಾಂಪಿಯನ್ ಆಗಲಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ಅದಕ್ಕೆ ಕಾರಣ ಕೆಕೆಆರ್​ ಇಂದಿನ ಫೈನಲ್​ ಪಂದ್ಯಕ್ಕೂ ಮುನ್ನ ಮೂರು ದಿನ ವಿಶ್ರಾಂತಿ ಪಡೆದಿದ್ದರು. ಈ ಹಂತದಲ್ಲಿ ಕೆಕೆಆರ್​, ಹೈದರಾಬಾದ್​ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೇಲೆ ಕೇಂದ್ರೀಕರಿಸಿದೆ.

ಚಾಂಪಿಯನ್ ಪಟ್ಟ ಯಾರಿಗೆ?

ಕ್ವಾಲಿಫೈಯರ್ -1ರಲ್ಲಿ ಹೈದರಾಬಾದ್​ ತಂಡವನ್ನು ಸೋಲಿಸಿದ ಆತ್ಮವಿಶ್ವಾಸ ಕೆಕೆಆರ್​ಗೆ ವರದಾನವಾಗಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಕೆಕೆಆರ್​ ಬಲಿಷ್ಠವಾಗಿದೆ ಎಂದು ಹೇಡನ್ ತಿಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಚಾಂಪಿಯನ್​ ಆಗಬಹುದು ಎಂದು ಕ್ರಿಕೆಟ್​ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

RELATED ARTICLES

Related Articles

TRENDING ARTICLES