Sunday, September 8, 2024

SRH ಎರಡನೇ ವಿಕೆಟ್ ಪತನ : ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್, ಟ್ರಾವಿಸ್ ಹೆಡ್ ಗೋಲ್ಡನ್ ಡಕ್

ಬೆಂಗಳೂರು : ಮಿಚೆಲ್ ಸ್ಟಾರ್ಕ್ ಬೆಂಕಿ ಬೌಲಿಂಗ್. ಅಭಿಷೇಕ್ ಶರ್ಮಾ ಕ್ಲೀನ್​ ಬೌಲ್ಡ್. ಟ್ರಾವಿಸ್ ಹೆಡ್ ಗೋಲ್ಡನ್​ ಡಕ್. ಕೆಕೆಆರ್​ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್​ಗೆ ಆರಂಭಿಕ ಆಘಾತವಾಗಿದೆ.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಐಪಿಎಲ್ 17ನೇ ಸೀಸನ್ನ ಫೈನಲ್ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ.

ಹೈದರಾಬಾದ್ ಪರ ಟ್ರಾವಿಸ್ ಹೆಡ್ ಹಾಗೂ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಇನ್ನಿಂಗ್ಸ್​ ಆರಂಭಿಸಿದರು. ಕೆಕೆಆರ್​ ಪರ ಮಿಚೆಲ್ ಸ್ಟಾರ್ಕ್ ಮೊದಲ ಓವರ್​ ಬೌಲ್​ ಮಾಡಿದರು.

ಮೊದಲ ಮೂರು ಬಾಲ್​ಗಳಲ್ಲಿ ಹೈದರಾಬಾದ್ ಯಾವುದೇ ರನ್ ಗಳಿಸಲಿಲ್ಲ. ನಾಲ್ಕನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಎರಡು ರನ್​ ಗಳಿಸಿದರು. ಬಳಿಕ, ಮಿಚೆಲ್​ ಸ್ಟಾರ್ಕ್​ ಎಸೆದ ಐದನೇ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ ಕೋಟಿ ವೀರ ಮಿಚೆಲ್ ಸ್ಟಾರ್ಕ್ ತನ್ನ ಸಾಮರ್ಥ್ಯ ಏನು ಎಂಬುವುದನ್ನು ತಿಳಿಸಿಕೊಟ್ಟರು.

ಅಭಿಷೇಕ್ ಬಳಿಕ ರಾಹುಲ್ ತ್ರಿಪಾಠಿ ಕ್ರೀಸ್​ಗೆ ಆಗಮಿಸಿದರು. ವೈಭವ್ ಅರೋರಾ ಎರಡನೇ ಓವರ್ ಬೌಲ್ ಮಾಡಿದರು. ಈ ಓವರ್​ನ 6ನೇ ಎಸೆತದಲ್ಲಿ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ಕ್ಯಾಚ್​ ನೀಡಿದರು. ಹೆಡ್​ ತಾನು ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್​ ಡಕ್​ ಆದರು.

ಪ್ರಸ್ತುತ ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕ್‌ರಾಮ್ ಕ್ರೀಸ್​ನಲ್ಲಿದ್ದಾರೆ. ಹೈದರಾಬಾದ್​ 3 ಓವರ್​ಗಳಲ್ಲಿ ಎರಡು ಪ್ರಮುಖ ವಿಕೆಟ್ ಕಳೆದುಕೋಂಡು 18 ರನ್​ ಗಳಿಸಿದೆ.

RELATED ARTICLES

Related Articles

TRENDING ARTICLES