Sunday, September 8, 2024

ಹಣ ಡಬಲ್​ ಮಾಡಿಕೊಡುವುದಾಗಿ ಹೇಳಿ ದಂಪತಿಯಿಂದ ₹30 ಕೋಟಿ ಪಂಗನಾಮ

ಕಲಬುರ್ಗಿ: ಷೇರು ಮಾರುಕಟ್ಟೆ ಹೆಸರಿನಲ್ಲಿ ಹಣ ದ್ವಿಗುಣ ಮಾಡುವುದಾಗಿ ಹೇಳಿ ₹30 ಕೋಟಿಗೂ ಅಧಿಕ ಹಣ ವಂಚನೆ ಮಾಡಲಾದ ಘಟನೆ ಕಲಬುರಗಿ ರೋಜಾ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿ ಹೆಸರಿನಲ್ಲಿ ಉತ್ಕರ್ಷ ಹಾಗೂ ಸಾವಿತ್ರಿ ದಂಪತಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾರೆ. ಇವರು ಗಾಂಧಿನಗರದ ಬಳಿ ಬಿ.ಎಲ್.ಕಾಂಪ್ಲೆಕ್ಸ್​ನಲ್ಲಿ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದರು.

ಇದನ್ನೂ ಓದಿ: ಮೇ 29ರ ವರೆಗೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಯುವಕ, ಯುವತಿಯರನ್ನೇ ಟಾರ್ಗೆಟ್​ ಮಾಡಿ ಹಣ ಹೂಡಿಗೆ ಮಾಡಿಸಿಕೊಳ್ತಿದ್ದರು. ಈವರೆಗೆ ಬರೋಬ್ಬರಿ 500ಕ್ಕೂ ಅಧಿಕ ಜನರಿಂದ 30 ಕೋಟಿ ರೂ. ಹಣ ವಂಚಿಸಿದ್ದಾರೆ. ಒಬ್ಬರಿಂದ 25 ಲಕ್ಷದಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಉತ್ಕರ್ಷಗೆ ಸಹಾಯ ಮಾಡ್ತಿದ್ದ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬುವರ ವಿರುದ್ದವು ದೂರು ದಾಖಲಾಗಿದೆ. ಇನ್ನು ಚಾಲಾಕಿ ದಂಪತಿಗಳು ಅಪಾರ್ಟ್​ಮೆಂಟ್​​ ನಿಂದ ಸುನಿಲ್​ ಎಂಬುವರ ಕಾರಿನಲ್ಲಿ ಎಸ್ಕೇಪ್​ ಆಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಈ ಪ್ರಕರಣ ಸಂಬಂಧ ಸುಧಾ ಎಂಬುವರನ್ನು ರೋಜಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES