Monday, July 8, 2024

ಭಾರೀ ಮಳೆಗೆ 4 ಸಾವಿರ ಬಾಳೆ ಗಿಡಗಳು ನಾಶ

ಕಾಫಿನಾಡು ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು ಇಂದು ಕೂಡ ಮುಂದುವರೆದಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತ ಮೈದುಂಬಿ ಹರಿಯುತ್ತಿದೆ.

ಮೊನ್ನೆವರೆಗೂ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ಒಂದೇ ರಾತ್ರಿಯ ಮಳೆಗೆ ಕಲ್ಲತ್ತಿಗರಿ ಜಲಪಾತ ಅಬ್ಬರಿಸಿ ಧುಮ್ಮಿಕ್ಕುತ್ತಿದೆ. ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆ ಆಗಿದೆ. ಇನ್ನು ದ್ದುಮ್ಮಿಕ್ಕಿ ಹರಿಯುತ್ತಿರೋ ಜಲಪಾತ ನೋಡಲು ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ.

ಭಾರೀ ಮಳೆಗೆ 4 ಸಾವಿರ ಬಾಳೆ ಗಿಡಗಳು ನಾಶ:

ಕಳೆದ ರಾತ್ರಿ ಕಲಬುರಗಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಾಲೂಕಿನ ಸೀತನೂರ ಗ್ರಾಮದಲ್ಲಿ ಏಳು ಎಕರೆ ಬಾಳೆ ಗಿಡಗಳು ನೆಲಕ್ಕೆ ಉರುಳಿವೆ. ಬಾಬುರಾವ್ ಎಂಬುವರಿಗೆ ಸೇರಿದ 4 ಎಕರೆಯಲ್ಲಿ ಬೆಳದಿದ್ದ 4 ಸಾವಿರ ಬಾಳೆ ಗಿಡಗಳು ನಾಶವಾಗಿದೆ. ಇನ್ನು ಇದೇ ವೇಳೆ ನಾಗಣ್ಣಗೌಡ ಎಂಬುವರ 3 ಎಕರೆಯಲ್ಲಿ ಬೆಳೆದಿದ್ದ 2,800 ಬಾಳೆ ಗಿಡಗಳು ನಾಶವಾಗಿದೆ. ಕೈಗೆ ಬರುತ್ತಿದ್ದ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆಗಿಡಗಳು ನಾಶವಾಗಿದೆ. ಪರಿಹಾರ ನೀಡುವಂತೆ ಅನ್ನದಾತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್​ ಬಿಲ್ ಬರೊಬ್ಬರಿ 80 ಲಕ್ಷ: ಬಾಕಿ ಪಾವತಿಸುವಂತೆ ಎಚ್ಚರಿಕೆ

ಮಂಡ್ಯದಲ್ಲಿ ಮಳೆ ಅವಾಂತರ:

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಬಾರಿ ಅವಾಂತರ ಸೃಷ್ಟಿಯಾಗಿದೆ. ವರುಣನ ಅಬ್ಬರಕ್ಕೆ ವಿದ್ಯುತ್ ತಂತಿ ಹಾಗೂ ಮರಗಳು ಧರೆಗುರುಳಿದೆ. ಹೆಗ್ಗಡಹಳ್ಳಿ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮನೆಗಳ ಮೆಲ್ಛಾವಣಿ ಹಾರಿಹೋಗಿವೆ. ಭಾರಿ ಬಿರುಗಾಳಿಗೆ ಮನೆಗಳ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಬೇರು ಸಮೇತ ಮರ ಧರೆಗುರುಳಿ ಗ್ರಾಮದ ಸಂಚಾರ ಸಂಪರ್ಕ ಕಡಿತಗೊಂಡಿದೆ. ಇನ್ನು ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ವಿದ್ಯುತ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹಾಸನದಲ್ಲಿ ಮಳೆಗೆ ಬೆಳೆ ನಾಶ:

ಹಾಸನ ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೇಲೂರು ತಾಲೂಕಿನ ಹಳೆಬೀಡು ಹೋಬಳಿಯಲ್ಲಿ ಗಾಳಿ ಮಳೆಗೆ ಬೆಳೆ ನಾಶವಾಗಿದೆ. ಬಾಳೆ, ಅಡಿಕೆ, ತೆಂಗು ಬೆಳೆ‌ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಕ್ಯಾತಲಾಪುರ ಗ್ರಾಮದಲ್ಲಿ ಶಿವಮೂರ್ತಿ ಎಂಬುವರಿಗೆ ಸೇರಿದ್ದ ಬಾಳೆ, ಅಡಿಕೆ, ತೆಂಗು ಬೆಳೆ ಧರೆಗುರುಳಿವೆ.

RELATED ARTICLES

Related Articles

TRENDING ARTICLES