Monday, July 8, 2024

ಮದ್ಯ ಪ್ರಿಯರಿಗೆ ಶಾಕ್: ಜೂನ್​ 1ರಿಂದ ಮದ್ಯ ಮಾರಟ ಸ್ಥಗಿತ

ಬೆಂಗಳೂರು: ಮದ್ಯಪ್ರಿಯರು ಮಿಸ್ ಮಾಡ್ದೇ ಈ ಸುದ್ದಿ ನೋಡಿ, ಯಾಕಂದ್ರೆ ಜೂನ್ 1 ರಿಂದ 6ರ ವರಗೆ ರಾಜ್ಯದ ಎಲ್ಲಾ ಬಾರ್ ಮತ್ತು ವೈನ್ ಶಾಪ್​ಗಳು ಬಂದ್ ಆಗಲಿವೆ.

ರಾಜ್ಯದಲ್ಲಿ ವಿಧಾನ ಪರಿಷತ್​ ಚುನಾವಣೆ ಹಾಗು ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯದ ಹಿನ್ನೆಲೆ ಬೆಂಗಳೂರಿನಲ್ಲಿ ಜೂನ್ 1 ರಿಂದ 6ರವೆಗೆ, ಜೂನ್ 5ನೇ ತಾರಿಖು ಹೊರತುಪಡಿಸಿ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್​ಗಳು ಸಂಪೂರ್ಣ ಬಂದ್ ಆಗಲಿವೆ.

ಇದನ್ನು ಓದಿ:ಶಕ್ತಿ ಗ್ಯಾರಂಟಿ ಎಫೆಕ್ಟ್: ಬಸ್​ ನಲ್ಲಿ ವಿದ್ಯಾರ್ಥಿಗಳ ಜೀವಕ್ಕಿಲ್ಲ ಗ್ಯಾರಂಟಿ 

ಜೂನ್ 3ರಂದು ಪದವೀಧರ ಕ್ಷೇತ್ರದ ಮತದಾನ ಹಿನ್ನಲೆ ಜೂನ್ 1ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3ರ ವರೆಗೆ ಬಂದ್ ಮಾಡುವಂತೆ ಜಿಲ್ಲಾಡಳಿತಗಳು ಆದೇಶ ಮಾಡಿದೆ. ಇನ್ನು ಜೂನ್ 4ರಂದು ಲೋಕಸಭೆಯ ಮತ ಎಣಿಕೆ‌ ಇದೆ. ಹಾಗಾಗಿ ಅಂದೂ ಸಹ ಇಡೀ ರಾಜ್ಯದಲ್ಲಿ ಎಲ್ಲಾ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್ ಶಾಪ್ ಬಂದ್​ ಆಗಲಿವೆ. ಮತ್ತೆ ಜೂನ್ 6ರಂದು MLC ಚುನಾವಣೆಯ ಮತ ಎಣಿಕೆ ಇರೋದ್ರಿಂದ ಅಂದು ಸಹ ಬಾರ್ ಅಂಡ್ ರೆಸ್ಟೋರೆಂಟ್ ಕ್ಲೋಸ್ ಆಗಲಿವೆ.

6 ದಿನಗಳಲ್ಲಿ 5 ದಿನ ಚುನಾವಣಾ ಕಾರಣದಿಂದ ಬಾರ್ ಮತ್ತು ವೈನ್ ಶಾಪ್ ಕ್ಲೋಸ್ ಆಗ್ತಿರೋದ್ರಿಂದ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.

RELATED ARTICLES

Related Articles

TRENDING ARTICLES