Friday, July 5, 2024

ದೇವೇಗೌಡರ ಸಾವು ಬಯಸುವ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು: ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡ ಅವರದ್ದು ಹೀನ ಸಂಸ್ಕೃತಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಎಲ್.ಆರ್ ಶಿವರಾಮೇಗೌಡ ಮಾತಾಡುವಾಗ ಸಭ್ಯತೆ ಮರೆಯೋದು ಹೊಸದೇನಲ್ಲ, ಕೇಡು ಬಯಸಿ ಆಡಿರುವ ಮಾತಿನ ಆಡಿಯೋ ವೈರಲ್ ಆಗಿದೆ. ಶಿವರಾಮೇಗೌಡರ ಮಾತುಗಳನ್ನು ಕೇಳಿರುವ ಜನಕ್ಕೆ ಎಂಥ ರಾಜಕಾರಣಿ ಅಂತ ಗೊತ್ತಾಗಿದೆ. ವಿಷಯಾಧಾರಿತ ರಾಜಕಾರಣ ಮಾಡಿ ಗೊತ್ತಿರದ ಮತ್ತು ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ ಎಂದು ನಿಖಿಲ್ ಹೇಳಿದರು.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​ ಮತ್ತು ಶಿವರಾಮೇಗೌಡ ವಿರುದ್ದ ಇಂದು ಜೆಡಿಎಸ್​ ಪ್ರತಿಭಟನೆ

ಕುಮಾರಸ್ವಾಮಿಯವರಿಗೆ ಕೇವಲ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಇದೆ ಅಂತಲೂ ಅವರು ಹೇಳಿದ್ದಾರೆ, ಆದರೆ ತಮ್ಮ ತಂದೆ ಯಾವತ್ತೂ ಹಾಗೆ ಯೋಚಿಸಿಲ್ಲ. ಬೇರೆಯವರ ಹಾಗೆ ಕುಮಾರಸ್ವಾಮಿಯವರು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ, ತಾನು ಯಾವುದೋ ಉನ್ನತ ಸ್ಥಾನದಲ್ಲಿರುತ್ತಿದ್ದೆ, ರಾಜಕಾರಣದಲ್ಲಿ ಪರಿಶ್ರಮ ವಹಿಸಿ ತನ್ನ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವೆನೆಂದು ಹೇಳಿದರು. ರಾಜಕಾರಣ ಮಾಡಲಿ, ಆದರೆ ಈ ರೀತಿಯ ನೀಚ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಬೇಕು:

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಘಟ‌ನೆ ಆದ ದಿನವೇ ಕುಮಾರಣ್ಣ ಹೇಳಿದ್ರು. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಎಸ್ ಐಟಿ ತನಿಖೆ ಮಾಡ್ತಾ ಇದೆ. ಸಂಸದರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಜೊತೆಯಂತು ಸಂಸದರು ಸಂಪರ್ಕದಲ್ಲಿಲ್ಲ ಎಂದಿದ್ದಾರೆ.

RELATED ARTICLES

Related Articles

TRENDING ARTICLES