Friday, July 5, 2024

ತೆಲಂಗಾಣ ಮಾದರಿಯಲ್ಲಿ ಸ್ಯಾಂಡಲ್​ವುಡ್ ಕ್ಲೋಸ್..? ಸ್ಟಾರ್​ಗಳ ​ ಅಂಗಳದಲ್ಲಿ ಇಂಡಸ್ಟ್ರಿ

ಫಿಲ್ಮಿಡೆಸ್ಕ್​:  ಕನ್ನಡ ಚಿತ್ರರಂಗ ನಿಂತ ನೀರಾಗಿದೆ. ದೊಡ್ಡ ಸ್ಟಾರ್​ಗಳ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಚಿತ್ರಪ್ರೇಮಿಗಳು ಥಿಯೇಟರ್​ಗೆ ಬರ್ತಿಲ್ಲ. ಬಾಕ್ಸ್ ಆಫೀಸ್ ಕಲೆಕ್ಷನ್ ಇಲ್ಲ. ಇದ್ರಿಂದ ಚಿತ್ರರಂಗದ ಏಳಿಗೆಯೂ ಇಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡಿಕೊಳ್ಳೋಕೆ ಫಿಲ್ಮ್ ಚೇಂಬರ್ ಮುಂದಾಗಿದೆ. ಮಹತ್ವದ ಸಭೆ ನಡೆಸಿ, ಬಹುದೊಡ್ಡ ಹೆಜ್ಜೆ ಇಡಲು ಮುಂದಾಗಿದೆ. ಆ ಕುರಿತ  ವರದಿ ಇಲ್ಲಿದೆ.

ತೆಲಂಗಾಣ ಮಾದರಿಯಲ್ಲಿ ಸ್ಯಾಂಡಲ್​ವುಡ್ ಕ್ಲೋಸ್..?

ಸ್ಟಾರ್ಸ್​ ಅಂಗಳದಲ್ಲಿ ಇಂಡಸ್ಟ್ರಿ.. ಅಳಿವು ಉಳಿವಿನ ಪ್ರಶ್ನೆ !

ಈ ವರ್ಷ ಐದು ತಿಂಗಳು ಕಳೆಯುತ್ತಾ ಬಂತು. ಇಲ್ಲಿಯವರೆಗೆ 101 ಸಿನಿಮಾ ರಿಲೀಸ್ ಆಗಿವೆ. ಗೆದ್ದಿದ್ದು ಮಾತ್ರ ಎರಡ್ಮೂರು. ಸದ್ದು ಮಾಡಿದ್ದು ಐದಾರು ಚಿತ್ರಗಳಾದ್ರೂ ಕಲೆಕ್ಷನ್ ಅಷ್ಟಕ್ಕಷ್ಟೇ. ಪಕ್ಕದ ಮಲಯಾಳಂ ಚಿತ್ರರಂಗ ಈ ವರ್ಷ ನಾಲ್ಕೈದು ಚಿತ್ರಗಳಿಂದ ಸಾವಿರ ಕೋಟಿ ಗಳಿಸಿದ್ರೆ, ನಮ್ಮ ಸ್ಟಾರ್​​ಗಳು ಮಾತ್ರ ಐದಾರು ವರ್ಷಗಳಿಗೆ ಸಾವಿರ ಕೋಟಿ ಗಳಿಸೋ ಯೋಜನೆಯಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ.

ಬಿಗ್ ಸ್ಟಾರ್​​ಗಳ ಬಿಗ್ ಮೂವೀಸ್ ಥಿಯೇಟರ್​ಗಳಿಗೆ ಬರ್ತಿಲ್ಲ. ಹೊಸಬರ ಚಿತ್ರಗಳು ಥಿಯೇಟರ್​ಗಳಲ್ಲಿ ನಿಲ್ಲುತ್ತಿಲ್ಲ. ಫಸ್ಟ್ ಆಫ್​ ಆಲ್ ಪ್ರೇಕ್ಷಕರೇ ಥಿಯೇಟರ್​ ಕಡೆ ಬರ್ತಿಲ್ಲ. ರೀ ರಿಲೀಸ್ ತಂತ್ರ ಅಳವಡಿಸಿಕೊಂಡ್ರೂ ವರ್ಕೌಟ್ ಆಗ್ತಿಲ್ಲ. ಮಾಸ್ ಕ್ರೌಡ್ ಚಿತ್ರಮಂದಿರಗಳ ಒಳಹೊಕ್ಕಬೇಕು ಅಂದ್ರೆ ದರ್ಶನ್, ಸುದೀಪ್, ಯಶ್, ಧ್ರುವ, ಉಪೇಂದ್ರ, ಶಿವರಾಜ್​​ಕುಮಾರ್, ದುನಿಯಾ ವಿಜಯ್, ಗಣೇಶ್ ಅಂತಹ ದೊಡ್ಡ ಸ್ಟಾರ್​ಗಳು ವರ್ಷಕ್ಕೆ ಕನಿಷ್ಟ ಎರಡ್ಮೂರು ಸಿನಿಮಾಗಳು ಮಾಡಬೇಕು.

ಇದನ್ನೂ ಓದಿ: ನಮ್ಮಮ್ಮ ಮತ್ತು ಚಂದು​ ಇಬ್ಬರು ಬೆಸ್ಟ್​ ಫ್ರೆಂಡ್ಸ್​ ಅಷ್ಟೆ: ನಟಿ ಪವಿತ್ರಾ ಗೌಡ ಪುತ್ರ ಸ್ಪಷ್ಟನೆ

ಕೊರೋನಾ ಕಾಲದಲ್ಲಿದ್ದ ಅದೇ ಸಂಕಷ್ಟಕ್ಕೆ ಮತ್ತೊಮ್ಮೆ ಸಿಲುಕಿದೆ ನಮ್ಮ ಚಂದನವನ. ಹಾಗಾಗಿ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಕೆ ಫಿಲ್ಮ್ ಚೇಂಬರ್ ಇಂದು ನಿರ್ಮಾಪಕರ ಸಂಘ, ಪ್ರದರ್ಶಕರು ಹಾಗೂ ವಿತರಕರನ್ನ ಕರೆಸಿ ಮಹತ್ವದ ಸಭೆ ನಡೆಸಿತು. ಅದರಲ್ಲಿ ಸಾರಾ ಗೋವಿಂದು, ಎನ್ ಕುಮಾರ್, ಸಾರಥಿ ಸತ್ಯ ಪ್ರಕಾಶ್, ನಾಗಣ್ಣ, ಕೆ ಮಂಜು, ಭೋಗೇಂದ್ರ, ಉಮೇಶ್ ಬಣಕಾರ್, ಎನ್ಎಂ ಸುರೇಶ್, ಪ್ರಮಿಳಾ ಜೋಷಾಯಿ, ಜಯಸಿಂಹ ಮುಸುರಿ, ಭಾಮಾ ಗಿರೀಶ್, ಕರಿಸುಬ್ಬು, ಕೆವಿ ಚಂದ್ರಶೇಖರ್ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿದ್ದರು.

ಸಕ್ರಿಯ ನಿರ್ಮಾಪಕರುಗಳಾದ ವಿಜಯ್ ಕಿರಗಂದೂರು, ಕೆವಿಎನ್, ಕೆಆರ್​ಜಿ, ಡಾಲಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಈ ಸಭೆಗೆ ಗೈರಾಗಿದ್ದು, ಚೇಂಬರ್ ಕೈಗೊಳ್ಳೋ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರಂತೆ. ದುನಿಯಾ ವಿಜಯ್​ರ ಭೀಮ, ಸುದೀಪ್​ರ ಮ್ಯಾಕ್ಸ್, ಧ್ರುವ ಸರ್ಜಾರ ಮಾರ್ಟಿನ್ ಚಿತ್ರಗಳು ಆದಷ್ಟು ಬೇಗ ರಿಲೀಸ್ ಆಗಬೇಕಿದೆ.

ಸದ್ಯ ಕಲಾವಿದರ ಸಂಘ ಹಾಗೂ ಕಲಾವಿದರಿಗೆ ಫಿಲ್ಮ್ ಚೇಂಬರ್ ಮಾತುಕತೆಗೆ ಬರಲು ಮನವಿ ಮಾಡಲಿದೆಯಂತೆ. ಚಿತ್ರರಂಗದ ಉಳಿವಿಗಾಗಿ ಎಲ್ಲರೂ ಪರಸ್ಪರ ಚರ್ಚಿಸಿ, ಒಮ್ಮತದಿಂದ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ತೆಲಂಗಾಣ ಮಾದರಿಯಲ್ಲಿ ಇಲ್ಲಿಯೂ ಸಹ ಒಂದು ತಿಂಗಳ ಮಟ್ಟಿಗೆ ಇಡೀ ಸ್ಯಾಂಡಲ್​ವುಡ್​​ನ ತಾತ್ಕಾಲಿಕವಾಗಿ ಬಂದ್ ಮಾಡೋ ಯೋಜನೆಯಲ್ಲಿದೆ ಫಿಲ್ಮ್ ಚೇಂಬರ್. ಆಗ ಥಿಯೇಟರ್​​ಗಳಲ್ಲಿ ಚಿತ್ರ ಪ್ರದರ್ಶನದ ಜೊತೆಗೆ ಶೂಟಿಂಗ್, ಪ್ರೊಡಕ್ಷನ್ ಕಾರ್ಯಗಳಿಗೂ ಬ್ರೇಕ್ ಬೀಳಲಿದೆ.

ಒಟ್ಟಾರೆ ಇದು ಕನ್ನಡ ಚಿತ್ರರಂಗದ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ದೊಡ್ಡ ಸ್ಟಾರ್​​ಗಳು ಇದಕ್ಕೆ ಸ್ಪಂದಿಸ್ತಾರಾ ಅನ್ನೋದು ಕಾದು ನೋಡಬೇಕಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES