Sunday, September 8, 2024

ಚಾರ್ಮಾಡಿ ಘಾಟ್​ನಲ್ಲಿ ಕೆಟ್ಟು ನಿಂತ ಬಸ್​: ಮಳೆಗೆ ಸಿಲುಕಿ ನೂರಾರು ಪ್ರಯಾಣಿಕರು ಹೈರಾಣು

ಚಿಕ್ಕಮಗಳೂರು: ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಮಳೆಯ ಪರಿಣಾಮ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಹಾಳಾಗಿ ನಿಂತುದರಿಂದ ನೂರಾರು ಪ್ರಯಾಣಿಕರು ಮಳೆಯಲ್ಲಿ ಸಿಲುಕಿಕೊಂಡು ಪಾಡು ಪಟ್ಟಿದ್ದಾರೆ.

ಭಾನುವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ದಾರಿ ಕಾಣದೆ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದುದರಿಂದ ಟ್ರಾಫಿಕ್‌ ಜಾಮ್‌ ಉಂಟಾಯಿತು. ಜೊತೆಗೆ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಟ್ಟು ನಿಂತ ಪರಿಣಾಮ, ವಾಹನಗಳು ಅತ್ತಿತ್ತ ಹೋಗಲಾಗದೆ ಪ್ರಯಾಣಿಕರು ಬವಣೆ ಅನುಭವಿಸಿದರು.

ಇದನ್ನೂ ಓದಿ: ದೇವೇಗೌಡರ ಸಾವು ಬಯಸುವ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: ನಿಖಿಲ್​ ಕುಮಾರಸ್ವಾಮಿ

ಚಾರ್ಮಾಡಿ ಘಾಟಿನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಮಳೆಯ ನಡುವೆ KSRTC ಬಸ್ಸುಗಳೆರಡು ಕೆಟ್ಟು ರಸ್ತೆ ಮಧ್ಯದಲ್ಲಿ ನಿಂತವು. ಬಸ್ಸುಗಳು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಬೆಳಗಿನ ಜಾವದಿಂದ ನೂರಾರು ವಾಹನಗಳು ನಿಂತಲ್ಲೇ ನಿಂತವು.  ಮಂಗಳೂರಿಗೆ ರೋಗಿಯನ್ನು ಒಯ್ಯುತ್ತಿದ್ದ ಒಂದು ಆಂಬ್ಯುಲೆನ್ಸ್ ಟ್ರಾಫಿಕ್ ನಡುವೆ ಸಿಲುಕಿಕೊಂಡಿತು. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಹರಸಾಹಸಪಟ್ಟರು.

RELATED ARTICLES

Related Articles

TRENDING ARTICLES