Sunday, July 7, 2024

ಪಂಜಾಬ್ ವಿರುದ್ಧ SRHಗೆ ಭರ್ಜರಿ ಗೆಲುವು : RR ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹೈದರಾಬಾದ್

ಬೆಂಗಳೂರು : ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ SRH ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಹೈದರಾಬಾದ್​ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಟಾಸ್ ಗೆದ್ದ ಪಂಜಾಬ್ 214 ರನ್​ ಪೇರಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ 19.1 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಇನ್ನಿಂಗ್ಸ್​ ಆರಂಭಿಸಿದ ಹೈದರಾಬಾದ್​ಗೆ ಉತ್ತಮ ಆರಂಭ ಸಿಗಲಿಲ್ಲ. ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಬಳಿಕ ಜೊತೆಯಾದ ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ 72 ರನ್​​ಗಳ ಉತ್ತಮ ಜೊತೆಯಾಟ ನೀಡಿದರು. ತ್ರಿಪಾಠಿ 33 ರನ್​ ಗಳಿಸಿ ಔಟಾದರು.

ಬಳಿಕ ಕ್ರೀಸ್​ಗೆ ಬಂದ ನಿತೀಶ್ ರೆಡ್ಡಿ ಅಭಿಷೇಕ್​ ಜೊತೆ 57 ರನ್​ಗಳ ಕಾಣಿಕೆ ನೀಡಿದರು. ನಿತೀಶ್ ಸಹ 37 ರನ್​ಗೆ ಆಟ ಮುಗಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಅಭಿಷೇಕ್​ ಶರ್ಮಾ ಜವಾಬ್ದಾರಿಯುತ ಆಟವಾಡಿದರು. 28 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ 66 ರನ್​ ಸಿಡಿಸಿ ಔಟಾದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ (42) ಅಬ್ಬರಿಸುವ ಮೂಲಕ ಹೈದರಾಬಾದ್​ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಭಿಷೇಕ್ ಶರ್ಮಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಕೊನೆಯಲ್ಲಿ ಅಬ್ದುಲ್ ಸಮದ್ ಅಜೇಯ 11 ಹಾಗೂ ಸನ್ವಿರ್ ಸಿಂಗ್ 6 ರನ್​ ಗಳಿಸಿದರು. ಪಂಜಾಬ್​ ಕಿಂಗ್ಸ್​ ಪರ ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು. ಶಶಾಂಕ್ ಸಿಂಗ್ ಹಾಗೂ ಹರ್ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್ ಪಡೆದರು. ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಸೋಲಿನೊಂದಿಗೆ ಪಂಜಾಬ್​ ಕಿಂಗ್ಸ್​ ಟೂರ್ನಿಗೆ ವಿದಾಯ ಹೇಳಿತು.

RELATED ARTICLES

Related Articles

TRENDING ARTICLES