Tuesday, July 9, 2024

ನಮ್ಮಮ್ಮ ಮತ್ತು ಚಂದು​ ಇಬ್ಬರು ಬೆಸ್ಟ್​ ಫ್ರೆಂಡ್ಸ್​ ಅಷ್ಟೆ: ನಟಿ ಪವಿತ್ರಾ ಗೌಡ ಪುತ್ರ ಸ್ಪಷ್ಟನೆ

ಮಂಡ್ಯ: ಊರಿನೊಂದಿಗೆ ಅಮ್ಮನ (ನಟಿ ಪವಿತ್ರಾ ಜಯರಾಂ) ಒಡನಾಟ ಚೆನ್ನಾಗಿಯೇ ಇತ್ತು ಎಂದು ಪವಿತ್ರ ಪುತ್ರ ಪ್ರಜ್ವಲ್​ ಅವರು ಹೇಳಿದ್ದಾರೆ.

ಪವಿತ್ರಾ ಜಯರಾಂ ಸಾವಿನ ವಿಚಾರದ ಬಗ್ಗೆ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ತಂಗಿ ಇಬ್ಬರು ತಾಯಿಯೊಂದಿಗೆ ಇದ್ದೆವು. ಹೈದ್ರಾಬಾದ್​ಗೆ ಅಜ್ಜಿ, ಚಿಕ್ಕಮ್ಮ ಬಂದಿದ್ರು. ಅವರನ್ನು ವಾಪಸ್ಸು ಬಿಟ್ಟು ಬರುವಾಗ ಅಪಘಾತವಾಯಿತು. ವೈದ್ಯರು ಆಸ್ಪತ್ರೆಗೆ ಬರುವ ಮುನ್ನವೇ ಸಾವನಪ್ಪಿದ್ರು ಎಂದು ತಿಳಿಸಿದರು. ಘಟನಾ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಹೋಗುವ ಮುನ್ನ ಉಸಿರಾಡ್ತಿದ್ದರು ಎಂದಿದ್ದರು. ನಮಗೆ ಇಂದಿಗೂ ಆ ವಿಚಾರ ಸರಿಯಾಗಿ ಗೊತ್ತಿಲ್ಲ ಎಂದರು.

ಪವಿತ್ರ ಹಾಗೂ ಚಂದ್ರಕಾಂತ್ ನಡುವೆ ರೂಮರ್ಸ್ ವಿಚಾರದ ಬಗ್ಗೆ ಮಾತನಾಡಿದ ಅವರು, ಇಂಡಿಸ್ಟ್ರಿಯಲ್ಲಿ ಯಾರಾದ್ರು ಜೊತೆಯಲ್ಲಿದ್ದರೆ ಮೊದಲು ಹುಟ್ಟಿಕೊಳ್ಳೋದೆ ರೂಮರ್ಸ್. ಆದರೆ, ಅಮ್ಮ-ಚಂದ್ರಕಾಂತ್ ಎಷ್ಟು ಒಳ್ಳೆಯ ಫ್ರೆಂಡ್​ ಎಂದು ನನಗೆ ಹಾಗೂ ಇಂಡಸ್ಟ್ರಿಗೆ ಗೊತ್ತು. ಅವರಿಬ್ಬರು ಬೆಸ್ಟ್ ಫ್ರೆಂಡ್​ ಆಗಿದ್ದರು. ಕೆಲವು ಇಂಟರ್ ವ್ಯೂಗಳಲ್ಲಿ ಅವರಿಬ್ಬರು ಮದುವೆ ಆಗೋಕೆ ತೀರ್ಮಾನ ಮಾಡಿದ್ದರು ಅಂತಿದ್ದಾರೆ. ಆದರೆ, ಅಷ್ಟೊಂದು ಮಾತುಕತೆ ಅವರ ಮಧ್ಯೆ ನಡೆದಿರಲಿಲ್ಲ. ನಮಗೂ ಕೂಡ ಅದರ ಬಗ್ಗೆ ಗೊತ್ತಿಲ್ಲ. ಚಂದ್ರಕಾಂತ್​ರ ಸಾವು ನಮಗೂ ಶಾಕ್ ಆಗಿದೆ.

ಇದನ್ನೂ ಓದಿ: ನಟಿ ಪವಿತ್ರಾ ಜಯರಾಮ್ ಸಾವಿನ ಬಳಿಕ ಗೆಳೆಯ ಚಂದು ಆತ್ಮಹತ್ಯೆ

ಹೈದ್ರಾಬಾದ್​ನಲ್ಲಿ ನಮಗೆ ಹತ್ತಿರ ಇದ್ದದ್ದು ಅವರೊಬ್ಬರೇ. ಪ್ಲಾಟ್ ಖರೀದಿಸುವ ಪ್ಲಾನ್​ನಲ್ಲಿಯೂ ಅಮ್ಮ ಇದ್ದರು. ಅಪ್ಪ ಶಿವಕುಮಾರ್ ಉಮ್ಮಡಹಳ್ಳಿ ಗ್ರಾಮದಲ್ಲೆ ಇದ್ದರು. ಅಮ್ಮ-ಅಪ್ಪ ಗಂಡ ಹೆಂಡತಿ ರೀತಿ ಇರಲಿಲ್ಲ. ಬೆಸ್ಟ್ ಫ್ರೆಂಡ್​ ರೀತಿ ಇದ್ದರು. ಅಪ್ಪ ಟಾರ್ಚರ್ ಕೊಟ್ಟಿದ್ರು ಎಂಬುದು ಸತ್ಯವಲ್ಲ. ಅವರ ಭಾಂದವ್ಯ, ಒಡನಾಟ ಇಡೀ ಊರಿನವರಿಗೆ ಗೊತ್ತು. ಅಮ್ಮ ನಮ್ಮ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ರು. ಮಕ್ಕಳು ಹೆಸರು ಮಾಡಬೇಕಿತ್ತು ಎಂಬ ಕನಸು ಕಟ್ಟಿಕೊಂಡಿದ್ರು. ಅದಕ್ಕಾಗಿಯೇ ಅಮ್ಮ ಅಷ್ಟೊಂದು ಕಷ್ಟಪಟ್ಟಿದ್ದು‌. ಅಮ್ಮ ನನ್ನನ್ನ ಆಕ್ಟರ್ ಆಗಬೇಕು ಅನ್ಕೊಂಡಿದ್ದರು. ತಂಗಿಯನ್ನ ಚೆನ್ನಾಗಿ ಓದಿಸಿ ವಿದೇಶಕ್ಕೆ ಕಳುಹಿಸಬೇಕು ಅನ್ಕೊಂಡಿದ್ರು. ಚಂದ್ರಕಾಂತ್ ಕೂಡ ನಮಗೆ ಸಹಾಯ ಮಾಡ್ತಿದ್ದರು. ಅಮ್ಮ ತೀರೋದಾಗ ಚಂದು ಅವರು ಶಾಕ್ ಆಗಿದರು. ಅಂತ್ಯಕ್ರಿಯೆ ಬಳಿಕ ನಾನಿದ್ದೀನಿ ಎಂಬ ಮಾತುಗಳನ್ನಾಡಿದರು. ಆದಾದ ಎರಡು ಮೂರು ದಿನವೂ ಚನ್ನಾಗಿಯೇ ಇದ್ದರು.

ಪವಿತ್ರಾ-ಚಂದ್ರಕಾಂತ್​ರ ಸಂಬಂಧದ ಬಗ್ಗೆ ಚಂದ್ರು ಕುಟುಂಬಸ್ಥರ ಆರೋಪದ ಬಗ್ಗೆ ಮಾತನಾಡಿದ ಪ್ರಜ್ವಲ್​, ಅವರಿಬ್ಬರು ಹೇಗಿದ್ದರು, ಎಷ್ಟು ಒಳ್ಳೆಯ ಫ್ರೆಂಡ್​ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನೋವಿದೆ ಎಂದು ಮಾತಾಡಬಾರದು ಎಂದು ಬೇಸರವ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES