Wednesday, July 3, 2024

ಬಂಧನದ ಭೀತಿ: ಜರ್ಮನಿಯಿಂದ ಲಂಡನ್​ಗೆ ಪರಾರಿಯಾದ ಪ್ರಜ್ವಲ್​

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಸುದ್ದಿ ಪವರ್​ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಏ.26ರಂದು ಮತದಾನ ಮಾಡಿದ ಬಳಿಕ ಜರ್ಮನಿಗೆ ಹಾರಿದ್ದ ಪ್ರಜ್ವಲ್​ ಇದೀಗ ಬಂಧನದ ಭೀತಿಯಿಂದ ಜರ್ಮನಿಯಿಂದಲೂ ಕಾಲ್ಕಿತ್ತಿದ್ದು, ಲಂಡನ್​ಗೆ ಹೋಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಇಂಗ್ಲೆಂಡ್​ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಸಂಸದ ಪ್ರಜ್ವಲ್​ ರೇವಣ್ಣ ಮತ್ತು ಅವರ ಇಬ್ಬರು ಗೆಳೆಯರು ರೈಲು ಮೂಲಕ ಜರ್ಮಿನಿಯ ಮ್ಯೂನಿಚ್ ಲಂಡನ್‌ಗೆ ಹೋಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ದುಬೈ ಮೂಲದ ಒರ್ವ ಮತ್ತು ಬೆಂಗಳೂರು ಮೂಲದ ಒರ್ವ ಸ್ನೇಹಿತ ಪ್ರಜ್ವಲ್​ ರೇವಣ್ಣ ಅವರ ಜೊತೆ ಇದ್ದಾರೆ. ಮೂರು ಮಂದಿ ಒಟ್ಟಿಗೆ ಲಂಡನ್​ಗೆ ಹೋಗಿರುವ ಸಾಧ್ಯೆತೆ ಇದೆ. ಇನ್ನು ಪ್ರಜ್ವಲ್​ ರೇವಣ್ಣ ಕೆಳದ 20 ದಿನಗಳಿಂದ ಕುಟುಂಬದ ಸಂಪರ್ಕದಲ್ಲಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣ: ಮಾಜಿ ಪ್ರಧಾನಿ ದೇವೇಗೌಡ ಫಸ್ಟ್​ ರಿಯಾಕ್ಷನ್​

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಅಂದರೆ ಜೂನ್ 4ರ ನಂತರ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ವರದಿಯಾಗಿತ್ತು. ಮತ್ತೊಂದೆಡೆ, ವಾಪಸಾಗುವಂತೆ ಕುಟುಂಬಸ್ಥರಿಂದ ಪ್ರಜ್ವಲ್​ಗೆ ಒತ್ತಡ ಹೆಚ್ಚಾಗಿದೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.

RELATED ARTICLES

Related Articles

TRENDING ARTICLES