Sunday, September 8, 2024

ಗೃಹ ಸಚಿವ ಪರಮೇಶ್ವರ ಹೆಸರಲ್ಲಿ ಕೋಟ್ಯಾಂತರ ರೂ.ವಂಚನೆ: ಆರೋಪಿ ಬಂಧನ

ಬೆಂಗಳೂರು: ಗೃಹಸಚಿವರ ಆಪ್ತ ಎಂದು ಹೇಳಿಕೊಂಡು ಮೆಡಿಕಲ್​ ಸೀಟ್​, ಬ್ಯಾಂಕ್​ ಲೋನ್​ ಗಳನ್ನು ಕೊಡಿಸುವುದಾಗಿ ಅಮಾಯಕರಿಗೆ ವಂಚಿಸುತ್ತಿದ್ದ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

ಕೊರಟಗೆರೆಯ ಮೊಹಮ್ಮದ್ ಝುಬೇರ್​ ಬಂಧಿತ ಆರೋಪಿ,  ಬೆಂಗಳೂರಿನ ಕೆಂಗೇರಿ ಪೊಲೀಸರಿಂದ ಆರೋಪಿ ಬಂಧನ ಮಾಡಲಾಗಿದೆ. ಆರೋಪಿ ಜುಬೇರ್​ ಗೃಹ ಸಚಿವ ಜಿ.ಪರಮೇಶ್ವರ್​ ಜೊತೆಯಲ್ಲಿ ಫೋಟೊ ತೆಗೆಸಿಕೊಂಡಿರುವ ಫೋಟೊ ಮತ್ತು  ರಾಜ್ಯಪಾಲರ ಲೆಟರ್ ಹೆಡ್ ಹಾಗೂ ಸಹಿಯನ್ನೇ ಫೋರ್ಜರಿ ಮಾಡಿ ಜನರನ್ನು ವಂಚಿಸುತ್ತಿದ್ದ.

ಬೆಂಗಳೂರು ಹಾಗೂ ತುಮಕೂರು ಸೇರಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಡಿಮೆ ಬೆಲೆಗೆ ಸೈಟ್, ಮೆಡಿಕಲ್ ಸೀಟ್, ಸ್ಮಾಲ್ ಇಂಡಸ್ಟ್ರಿಗಳಲ್ಲಿ ಕೆಲಸ, ಬ್ಯಾಂಕ್‌ಗಳಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಹಲವರಿಂದ ಬರೊಬ್ಬರಿ 6 ಕೋಟಿಗೂ ಅಧಿಕ ಮೊತ್ತದ ವಂಚನೆ ಮಾಡಿದ್ದ.

ಇದನ್ನೂ ಓದಿ: ಕೊಲೆ ಆರೋಪಿಗಳ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡು

ಬೆಂಗಳೂರಿನ ಕೆಂಗೇರಿ ನೀವಾಸಿ ಸಾಯಿದ ತಬಸುಮ್ ಎಂಬ ಮಹಿಳೆಯ ಬಳಿಯೂ ಇದೇ ರೀತಿ 1 ಕೋಟಿ 20 ಲಕ್ಷ ಹಣ, 186 ಗ್ರಾಂ ಚಿನ್ನ ಪಡೆದು ವಂಚನೆ ಮಾಡಿದ್ದ. ವಂಚಿಸಿದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಾ ಇಟ್ಟಿಗೆ ಫ್ಯಾಕ್ಟರಿಯನ್ನು ನಡೆಸುತ್ತಿದ್ದ.

ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕೆಂಗೆರಿ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಜುಬೇರ್ ಹಾಗೂ ಆತನ ಪತ್ನಿ ವಿರುದ್ದ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಜುಬೇರ್​ , ಆತನ ಪತ್ನಿಯನ್ನು ಪೊಲೀರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ. ಈತನ ವಿರುದ್ದ ಈಗಾಗಲೇ ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಒಟ್ಟು 14 ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದ್ದು ಪೊಲೀಸರಿಂದ ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES