Sunday, July 7, 2024

ನಾನು ಹೋದ್ರೆ ಮತ್ತೆ ನೀವು ನನ್ನನ್ನು ನೋಡಲ್ಲ : ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಸುಳಿವು

ಬೆಂಗಳೂರು : ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್​ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ನಾನು ಹೋದರೆ ಮತ್ತೆ ನೀವು ನನ್ನನ್ನು ನೋಡಲ್ಲ ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಒಂದು ಶತಕ ಹಾಗೂ 5 ಅರ್ಧಶತಕ ಸಿಡಿಸಿರುವ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ಈ ಯಶಸ್ಸಿನ ಓಟದ ಬಗ್ಗೆ ರಾಯಲ್ ಗಾಲಾ ಡಿನ್ನರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಕ್ರೀಡಾಪಟು ತನ್ನ ವೃತ್ತಿ ಜೀವನದ ಕೊನೆಯ ದಿನ ನೋಡಲೇಬೇಕಿದೆ. ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ವಿಷಾಧ ಇರಬಾರದು. ಖಂಡಿತವಾಗಿಯೂ ಆ ರೀತಿ ಆಗಲು ನಾನು ಅವಕಾಶ ನೀಡುವುದಿಲ್ಲ. ಒಮ್ಮೆ ನಾನು ಇದನ್ನೆಲ್ಲಾ ಮುಗಿಸಿ ಹೋದರೆ, ಮತ್ತೆ ನೀವು ನನ್ನನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಎಂದಿಗೂ ಆಡುತ್ತಲೇ ಇರಲು ಸಾಧ್ಯವಿಲ್ಲ. ಯಾವುದೇ ಕೆಲಸವನ್ನು ಪೂರ್ಣಗೊಳಿಸದೆ ಇರಲು ಬಯಸುವುದಿಲ್ಲ. ನನಗೆ ಬಳಿಕ ಯಾವುದೇ ಪಶ್ಚತಾಪ ಪಡುವಂತಾಗಬಾರದು, ಖಂಡಿತ ಹಾಗೆ ಆಗುವುದಿಲ್ಲ. ಕ್ರಿಕೆಟ್ ನಿವೃತ್ತಿಯ ಬಳಿಕ ತಾನು ಸುದೀರ್ಘ ಬ್ರೇಕ್ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ.

ಅಭಿಮಾನಿಗಳಿಗೆ ದೊಡ್ಡ ಶಾಕ್

ಇದುವರೆಗೆ ನಿವೃತ್ತಿಯ ಬಗ್ಗೆ ಎಲ್ಲಿಯೂ ಹೇಳಿರದ ವಿರಾಟ್ ಕೊಹ್ಲಿ, ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ. ಒಮ್ಮೆ ಮುಗಿದರೆ, ನಾನು ದೂರವಾಗುತ್ತೇನೆ. ಸುಮಾರು ಸಮಯದವರೆಗೆ ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ ಎಂದಿರುವುದು ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

RELATED ARTICLES

Related Articles

TRENDING ARTICLES