Sunday, September 8, 2024

89 ಜನ ಸದಸ್ಯರು ಹೋದ್ರೆ ಸರ್ಕಾರ ಬೀಳುತ್ತೆ : ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು : ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಸರ್ಕಾರ ಬೀಳಲಿದೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ 89 ಜನ ಸದಸ್ಯರು ಹೋದ್ರೆ ಸರ್ಕಾರ ಬೀಳುತ್ತೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್​ನಿಂದ 15, 20 ಜನ ಬರುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿ ಅವರಿದ್ದಾರೆ. ಇದರ ಬಗ್ಗೆ ಹೋಗಿ ಏಕನಾಥ್ ಶಿಂಧೆಗೆ ಕೇಳಿ ಎಂದು ಕುಟುಕಿದ್ದಾರೆ.

ಏಕನಾಥ್ ಶಿಂಧೆ ಆ್ಯಂಟಿ ಡಿಪೆಕ್ಷನ್ ಲಾ ಏನಿದೆ ಅಭ್ಯಸಿಸಲಿ. ಮಹಾರಾಷ್ಟ್ರದಲ್ಲಿ ಟೂ ಥರ್ಡ್ ಮೆಜಾರಿಟಿ ಇರಲಿಲ್ಲ. ಹಾಗಾಗಿ, ಅವರು ಅಲ್ಲಿ ಸರ್ಕಾರ ರಚನೆ ಮಾಡಿದ್ರು. ಸ್ಯಾಂಪಲ್ ಐದು ಜನರನ್ನ ಕರೆದೊಯ್ಯಲಿ. ನಮ್ಮ ಪಕ್ಷದಲ್ಲಿ ಅಂತಹ ಶಾಸಕರಿಲ್ಲ. ಐದಾರು ಮಂದಿ ನಮ್ಮ ಜೊತೆಗಿದ್ದಾರೆ. ನಮ್ಮ ಜೊತೆ ಓಪನ್ ಆಗಿ ಕೆಲವರು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲಿಗೆ ಹೋದವ್ರು ಪಶ್ಚಾತ್ತಾಪ ಪಡ್ತಿದ್ದಾರೆ

ಏಕನಾಥ್ ಶಿಂಧೆ ಸರ್ಕಾರ ಬೀಳಲಿದೆ. ಮಹಾರಾಷ್ಟ್ರದಲ್ಲಿ ಅವರ ಸರ್ಕಾರವೇ ಬೀಳಲಿದೆ. ಉದ್ಧವ್ ಠಾಕ್ರೆ ಪರ ಅಲ್ಲಿ ಜನ ಇದ್ದಾರೆ. ಅಲ್ಲಿಗೆ ಹೋದವರು ಪಶ್ಚಾತ್ತಾಪ ಪಡ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಸರ್ಕಾರ ಬೀಳಲಿದೆ. ಏಕನಾಥ್ ಶಿಂಧೆ ಸರ್ಕಾರ ಅಲ್ಲಿ ಬೀಳಲಿದೆ. ಉದ್ಧವ್ ಠಾಕ್ರೆ ಪರ ಅಲ್ಲಿ ಹೋಗ್ತಾರೆ. ಈ‌ಚುನಾವಣೆ ಮುಗಿದ ಮೇಲೆ ನೋಡಿ ಏನಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಏಕನಾಥ್ ಶಿಂಧೆ ಮಾಜಿ ಆಗ್ತಾರೆ ನೋಡಿ

ನಿಮ್ಮನ್ನು ಅಲ್ಲಿನವರು ಸಂಪರ್ಕ ಮಾಡ್ತಿದ್ದಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನಮ್ಮ ಬಾರ್ಡರ್​ನಲ್ಲಿಯೇ ತಾನೇ ಇರೋದು. ಜತ್ತ, ಸಾಂಗ್ಲಿ ಎಲ್ಲವೂ ನಮ್ಮ ಬಾಜೂ ಬರ್ತಾವೆ. ಏಕನಾಥ್ ಶಿಂಧೆ ಮಾಜಿ ಆಗ್ತಾರೆ ನೋಡಿ. ಮಹಾ ಸರ್ಕಾರವೇ ಬೀಳುತ್ತೆ ಎಂದು ಎಂ.ಬಿ. ಪಾಟೀಲ್ ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES