Friday, August 30, 2024

RCBಗೆ 47 ರನ್​ಗಳ ಭರ್ಜರಿ ಗೆಲುವು : ಪ್ಲೇಆಫ್ ಆಸೆ ಇನ್ನೂ ಜೀವಂತ

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 47 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆರ್​ಸಿಬಿ ಪ್ಲೇಆಫ್​ ಕನಸು ಇನ್ನೂ ಜೀವಂತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಬ್ಯಾಟಿಂಗ್ ಮಾಡಿದ ಆರ್​ಸಿಬಿ 187 ರನ್ ಗಳಿಸಿತು. 188 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ 19.1 ಓವರ್​ಗಳಲ್ಲಿ ಕೇವಲ 140 ರನ್​ ಗಳಿಸಿ ಆಲೌಟ್​ ಆಯಿತು.

ಇನ್ನಿಂಗ್ಸ್​ ಆರಂಭಿಸಿದ ಡೆಲ್ಲಿಗೆ ಆರ್​ಸಿಬಿ ಬೌಲರ್​ಗಳ ದೊಡ್ಡ ಆಘಾತ ನೀಡಿದ್ದಾರೆ. 4 ಓವರ್​ಗಳಲ್ಲಿ 4 ಕಬಳಿಸಿದರು. ಸಂಕಷ್ಟದಲ್ಲಿದ್ದ ಡೆಲ್ಲಿಗೆ ನಾಯಕ ಅಕ್ಸರ್ ಪಟೇಲ್ 57 ಆಸರೆಯಾದರು. ಹೋಪ್ 26 ರನ್​ ಗಳಿಸಿದರು. ಉಳಿದ ಯಾವೊಬ್ಬ ಬ್ಯಾಟರ್​ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಆರ್​ಸಿಬಿ ಪರ ಯಶ್ ದಯಾಳ್ 3, ಫರ್ಗುಸನ್ 2, ಸ್ವಪ್ನಿಲ್, ಮೊಹಮ್ಮದ್ ಸಿರಾಜ್, ಗ್ರೀನ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 187 ರನ್​ ಗಳಿಸಿತು. ಆರ್​ಸಿಬಿ ಪರ ರಜತ್ ಪಾಟೀದಾರ್ 52, ವಿಲ್ ಜಾಕ್ಸ್​ 41, ವಿರಾಟ್ ಕೊಹ್ಲಿ 27, ಕ್ಯಾಮೆರೂನ್ ಗ್ರೀನ್ ಅಜೇಯ 32 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್​ ಪರ ಖಲೀಲ್ ಅಹ್ಮದ್ ಹಾಗೂ ರಸಿಖ್ ಸಲಾಂ ತಲಾ 2, ಇಶಾಂತ್ ಶರ್ಮಾ ಹಾಗೂ ಮುಖೇಶ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES