Sunday, September 8, 2024

ಬಿಸಿಲ ತಾಪಕ್ಕೆ ಕಲ್ಲುಬಂಡೆಗಳ ಮೇಲೆ ಸತ್ತು ಬಿದ್ದಿರುವ ಮೊಸಳೆಗಳು!

ರಾಯಚೂರು: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಹೆಚ್ಚಾಗಿದ್ದು ಬಿಸಿಲ ತಾಪ ತಾಳಲಾರದೇ ಮೊಸಳೆಗಳ ಮಾರಣಹೋಮ ನಡೆದಿರುವ ಘಟನೆ ಜಿಲ್ಲೆಯ ಕೃಷ್ಣಾ ನದಿ ದಂಡೆಮೇಲೆ ನಡೆದಿದೆ.

ಈ ಬಾರಿ ರಾಯಚೂರು ಜಿಲ್ಲೆಯಲ್ಲಿ 45 ಡಿ.ಸಿ ನಷ್ಟು ಅತ್ಯಧಿಕ ಬಿಸಿಲಿನ ತಾಪಮಾನ ದಾಖಲಾಗಿದೆ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ದೇವಸುಗೂರು ಭಾಗದಲ್ಲಿ ಬಿಸಿಲಿಗೆ ಕೃಷ್ಣನದಿ ನೀರು ಸಂಪೂರ್ಣ ಬತ್ತಿಹೋಗಿದ್ದು ನದಿ ನೀರನ್ನೇ ಅವಲಂಭಿಸಿದ್ದ ಮೊಸಳೆಗಳ ಮಾರಣ ಹೋಮ ನಡೆದಿದೆ.

ಇದನ್ನೂ ಓದಿ:  ಮುಂದಿನ 6 ದಿನಗಳ ಕಾಲ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಇಷ್ಟು ದಿನ ಕೃಷ್ಣಾನದಿ ಸುತ್ತ ಅಲ್ಲಲ್ಲಿ ನಿಂತಿದ್ದ ನೀರನ್ನು ಅವಲಂಂಭಿಸಿ ಜೀವಿಸಿದ್ದ ಮೊಸಳೆಗಳು ತಾಪಮಾನ ಏರಿಕೆಯಿಂದ ನೀರಿ ಖಾಲಿಯಾಗಿ ಬಿಸಿಲಿನ ತಾಪಕ್ಕೆ ನದಿಸುತ್ತ ಇರುವ ಕಲ್ಲುಬಂಡೆಗಳ ಮೇಲೆ ಸತ್ತು ಬಿದ್ದಿದ್ದು ಸತ್ತ ಜಾಗದಲ್ಲೇ ಕೊಳೆಯುತ್ತಿದೆ.

RELATED ARTICLES

Related Articles

TRENDING ARTICLES