Sunday, May 19, 2024

ಇನ್ಮುಂದೆ ನಾಯಿಗಳಿಗೆ ಇಷ್ಟ ಬಂದಾಗ ಊಟ ಹಾಕುವಂತಿಲ್ಲ: ಬಿಬಿಎಂಪಿ

ಬೆಂಗಳೂರು: ಇನ್ಮುಂದೆ ಸಿಲಿಕಾನ್​ ಸಿಟಿ ಮಂದಿ ನಾಯಿಗಳಿಗೆ ಇಷ್ಟಾ ಬಂದಾಗ ಊಟ ಹಾಕುವಂತಿಲ್ಲ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ಆಯುಕ್ತ ರವಿಕುಮಾರ್​ ತಿಳಿಸಿದ್ದಾರೆ.

ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನೀಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಇನ್ಮುಂದೆ ಯಾವಾಗಂದ್ರೆ ಆಗ ಊಟ ಹಾಕುವಂತಿಲ್ಲ, ಇದಕ್ಕೆ ಅಂತ ಒಂದು ಸಮಯವನ್ನು ನಿಗಧಿ ಮಾಡಲಾಗಿದೆ. ಇದರ ಜೊತೆಗೆ ಊಟ ಹಾಕುವ ಜಾಗ, ಸಮಯ ಗುರ್ತಿಸಲು ಪಾಲಿಕೆ ಚಿಂತನೆ ನಡೆಸಿದೆ ಎಂದರು.

ಇದನ್ನೂ ಓದಿ: ಸ್ವೀಟ್​ಗಾಗಿ ಮುರಿದು ಬಿತ್ತು ಮದುವೆ

ಬೆಳಗಿನ ಜಾವ 3 ರಿಂದ 4 ಗಂಟೆಯ ಒಳಗೆ ಊಟ ಹಾಕಬೇಕು, ರಾತ್ರಿಯಲ್ಲಿ ತಡರಾತ್ರಿ ಊಟ ಹಾಕಬೇಕು, ಬೆಳಗ್ಗೆ ರಸ್ತೆಗಳು, ಅಪಾರ್ಟ್​ಮೆಂಟ್​ ಮುಂದೆ ಊಟ ಹಾಕುವುದರಿಂದ ರಸ್ತೆಯಲ್ಲಿ ಓಡಾಡುವ ಮಕ್ಕಳು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವಯೋ ವೃದ್ದರ ಮೇಲೂ ನಾಯಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು, ಹೀಗಾಗಿ ನಾಯಿಗಳ ಊಟದ ವಿಚಾರದಲ್ಲಿ ಸಮಯ ಪಾಲನೆ ಮಾಡುವಂತೆ ತಿಳಿಸಿದರು.

ನಗರದಲ್ಲಿ ನಾಯಿಗಳ ಊಟಕ್ಕೆ ಹಾಕುವುದಕ್ಕಾಗಿಯೇ ಕೆಲವು ಜಾಗಗಳನ್ನು ನಿಗಧಿ ಮಾಡಿ ಬೋರ್ಟ್​ ಹಾಕಲಾಗುವುದು. ಆ ಸ್ಥಳದಲ್ಲಿ ಮಾತ್ರ ಸಾರ್ವಜನಿಕರು ಊಟ ಹಾಕಬೇಕು ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES