Tuesday, July 9, 2024

ರೇವಣ್ಣ ವಿರುದ್ದ ಸಂತ್ರಸ್ತೆಯ ಪುತ್ರ ದೂರು ದಾಖಲು: FIR ನಲ್ಲಿ ಏನಿದೆ?

ಹಾಸನ: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣದ ಸ್ಪೋಟಕ ಮಾಹಿತಿ ಪವರ್​ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ದೇಶಾದ್ಯಂತ ಬಾರಿ ಚರ್ಚೆಗೆ ಕಾರಣವಾಗಿದೆ, ಪ್ರಜ್ವಲ್ ರೇವಣ್ಣ ಕುಟುಂಬದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಸರ್ಕಾರ SIT ತನಿಖಾ ತಂಡವನ್ನು ನೇಮಿಸಿದೆ. ಈ ನಡುವೆ ಪ್ರಕರಣದ ಎ1 ಆರೋಪಿ ಹೆಚ್​.ಡಿ ರೇವಣ್ಣ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ನಾಶಕ್ಕೆ ಇಳಿದಿರುವ ರೇವಣ್ಣ ಮತ್ತು ಕುಟುಂಬ ಪ್ರಜ್ವಲ್​ ರೇವಣ್ಣರಿಂದ ಲೌಂಗಿಕದೌರ್ಜನ್ಯಕ್ಕೀಡಾಗಿರುವ ಸಂಸ್ರಸ್ತ ಮಹಿಳೆಯ ಕಿಡ್ನಾಪ್​ ಮಾಡುವ ಮೂಲಕ ಸಾಕ್ಷಿ ನಾಶಕ್ಕೆ ಇಳಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಸಂತಸ್ತ ಮಹಿಳೆ ಪುತ್ರ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ಎ1 ಆರೋಪಿ, ಮಾಜಿ ಸಚಿವ ರೇವಣ್ಣ ವಿರುದ್ದ ಸಂತ್ರಸ್ತೆ ಪುತ್ರ ದಾಖಲಿಸಿರುವ ಕಿಡ್ನಾಪ್​ ಪ್ರಕರಣದ ಎಫ್​ಐಆರ್​ ಪ್ರತಿಯಲ್ಲಿ ಏನಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣನಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ಥ ತಾಯಿ ಕಣ್ಮರೆ, ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಿಸಿದ ಮಗ

ನನ್ನ ತಾಯಿ 6 ವರ್ಷಗಳಿಂದ  ಚೆನ್ನಾಂಬಿಕ ಥಿಯೇಟರ್‌ ಪಕ್ಕದಲ್ಲಿರುವ ರೇವಣ್ಣ ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು, 3 ವರ್ಷಗಳ ಹಿಂದೆ ಕೆಲಸ ತೊರೆದಿದ್ದರು, ಲೋಕಸಭಾ ಚುನಾವಣೆಗೂ 4 ದಿನಗಳ ಮೊದಲು  ಹೆಬ್ಬಾಳುಕೊಪ್ಪಲಿನ ಸತೀಶ್​​​ ಅಣ್ಣ ನಮ್ಮ ಮನೆಗೆ ಬಂದು ಭವಾನಿ ಅಕ್ಕ ಕರೆದಿದ್ದಾರೆ ಎಂದು ಹೇಳಿ ನಮ್ಮ ತಾಯಿಯನ್ನು ಹೊಳೆನರಸೀಪುರಕ್ಕೆ ಕರೆದೊಯ್ದರು. ಬಳಿಕ ಚುನಾವಣೆ ದಿನ ನಮ್ಮ ತಾಯಿಯನ್ನ ಮನೆಗೆ ತಂದು ಬಿಟ್ಟರು.

ಪೊಲೀಸರು ಬಂದರೆ ಏನನ್ನೂ ಹೇಳಬೇಡಿ, ಹೇಳಿದ್ರೆ ನಿಮ್ಮ ಮೇಲೆ ಕೇಸ್ ಆಗುತ್ತೆ ಎಂದು ಬೆದರಿಕೆ ಹಾಕಿದ್ದರು. ಏಪ್ರಿಲ್ 29ರಂದು ಮತ್ತೆ ಸತೀಶ್‌ ನಮ್ಮ ಮನೆಗೆ ಬಂದಿದ್ದರು. ರೇವಣ್ಣ ಸಾಹೇಬ್ರು ನಿಮ್ಮನ್ನು ಕರೆತರಲು ಹೇಳಿದ್ದಾರೆ ಎಂದು ಹೇಳಿ ನಮ್ಮ ತಾಯಿಯನ್ನ ರೇವಣ್ಣ ಶಿಷ್ಯ ಸತೀಶ್‌ ಬಾಬಣ್ಣ ತಮ್ಮ ಬೈಕ್​ನಲ್ಲಿ ಕರೆದುಕೊಂಡು ಹೋದರು.

ಮೇ 1ರಂದು ನನ್ನ ಮನೆಗೆ ಬಂದ ಸ್ನೇಹಿತರು ನಿಮ್ಮ ಅಮ್ಮನದ್ದು ವಿಡಿಯೋ ಬಂದಿದೆ ಗೊತ್ತಾ ಎಂದು ಕೇಳಿದ್ರು
ನನ್ನ ಬಾವಂದಿರು ಸಹ ಫೋನ್ ಮಾಡಿ ಇದನ್ನೇ ಹೇಳಿದ್ರು, ಕಾಲಿಗೆ ಬಿದ್ರೂ ಪ್ರಜ್ವಲ್ ಅಣ್ಣ ಬಲತ್ಕಾರ ಮಾಡಿದ್ದಾರೆ ಎಂದರು. ಈ ಬಗ್ಗೆ ಕೂಡ ಕೇಸ್ ಆಗಿದೆ ಎಂದು ನನ್ನ ಬಾವಂದಿರು ನನಗೆ ತಿಳಿಸಿದರು, ನಾನು ಕೂಡಲೇ ಸತೀಶ್‌ ಬಾಬಣ್ಣಗೆ ಕರೆ ಮಾಡಿದೆ ತಾಯಿ ಎಲ್ಲಿದ್ದಾರೆ, ಅಡುಗೆ ಮಾಡಲು ಜನರಿಲ್ಲ, ಕಳುಹಿಸಿಕೊಡಿ
ವಾಪಸ್‌ ತಾಯಿಯನ್ನ ಕರೆದುಕೊಂಡು ಬನ್ನಿ ಎಂದು ಹೇಳಿದೆ. ಆಗ ಬಾಬಣ್ಣ ನಿನ್ನ ಅಮ್ಮ ರೇವಣ್ಣ ಸಾಹೇಬರ ಜತೆ ಗಲಾಟೆ ಮಾಡಿದ್ದಾರೆ ಅದಕ್ಕೆ ಎಫ್ಐಆರ್ ಆಗಿದೆ, ಜಾಮೀನು ಆಗಬೇಕು ಎಂದರು. ಈಗ ನಿನ್ನ ಫೋನ್‌ನಲ್ಲಿ ಮಾತಾಡಬೇಡ, ಬೇರೆಯವರ ಫೋನ್‌ನಲ್ಲಿ ಮಾತಾಡು ಎಂದು ಹೇಳಿದರು.

ಈಗ ನನ್ನ ತಾಯಿಯನ್ನ ಗೊತ್ತಿಲ್ಲದ ಜಾಗದಲ್ಲಿ ಕೂಡಿ ಹಾಕಿದ್ದಾರೆ ನನ್ನ ತಾಯಿಯನ್ನ ಕರೆದೊಯ್ದ ಸತೀಶ್‌ ಬಾಬಣ್ಣ ತಾಯಿಯನ್ನ ಕರೆದುಕೊಂಡು ಬರಲು ಹೇಳಿದ ರೇವಣ್ಣ ವಿರುದ್ಧ ಕ್ರಮ ಜರುಗಿಸಿ ಎಂದು ಸಂತ್ರಸ್ತ ಮಹಿಳೆಯ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES