Monday, July 8, 2024

ಸಂತ್ರಸ್ತೆ ಮೇಲೆ ಗನ್​ ಪಾಯಿಂಟ್​​ನಲ್ಲಿ ಪ್ರಜ್ವಲ್​ ಅತ್ಯಾಚಾರ

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್​ಡ್ರೈವ್​ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಹೊರಬರುತ್ತಿದೆ. ಇದೀಗ ಪ್ರಜ್ವಲ್​ ರೇವಣ್ಣ ವಿರುದ್ದ ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ರೇಪ್‌ ಮಾಡಿದ್ದಾಗಿ ದೂರು ದಾಖಲಾಗಿದೆ. ಇದರೊಂದಿಗೆ ಪ್ರಜ್ವಲ್​ ರೇವಣ್ಣ ಕಾಮಕಾಂಡಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ರೇವಣ್ಣ ವಿರುದ್ದ ಸಂತ್ರಸ್ತೆಯ ಪುತ್ರ ದೂರು ದಾಖಲು: FIR ನಲ್ಲಿ ಏನಿದೆ?

ಜೆಡಿಎಸ್‌ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಮಹಿಳೆಯೊಬ್ಬರು ಕಾಮಾಸುರ ಪ್ರಜ್ವಲ್‌ ರೇವಣ್ಣ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಈ ವಿಚಾರ ಬಾಯ್ಬಿಟ್ಟರೆ ನಿನ್ನ ಗಂಡನನ್ನ ಬಿಡೋದಿಲ್ಲ. ನಾನು ಕರೆದಾಗೆಲ್ಲಾ ಬರಬೇಕು ಅಂತ ಬೆದರಿಸಿದ್ದರು. ನಾನು ಕರೆದಾಗ ಬರದಿದ್ರೆ ವಿಡಿಯೋ ರಿಲೀಸ್ ಮಾಡ್ತೀನಿ ಅಂತಾ ಬೆದರಿಕೆ ಹಾಕುತ್ತಿದ್ದರು. ಗನ್‌ ಪಾಯಿಂಟ್‌ನಲ್ಲಿ ರೇಪ್‌ ಮಾಡಿ ವಿಡಿಯೋ ಶೂಟ್‌ ಮಾಡಿದ್ದಾರೆ. ಈ ಬಗ್ಗೆ ಜಿ.ಪಂ. ಮಾಜಿ ಸದಸ್ಯೆ ದೂರು ಕೊಟ್ಟಿದ್ದಾಳೆ. ಸದ್ಯ ಸಂತ್ರಸ್ತ ಮಹಿಳೆಯ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೊಗಳ ಪೆನ್​ಡ್ರೈವ್​ ಸ್ಪೋಟಕ ಮಾಹಿತಿಯ ಸುದ್ದಿಯನ್ನು ಪವರ್​ ಟಿವಿ ಪ್ರಸಾರ ಮಾಡಿತ್ತು, ಈ ವರದಿಯ ಬೆನ್ನಲ್ಲೇ ದೇಶಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ SIT ತಂಡವನ್ನು ರಚಿಸಿದೆ. ಇದೀಗ ಪ್ರಜ್ವಲ್ ಕಾಮಕಾಂಡದ ಅಕ್ರಮಗಳು ಬಗೆದಷ್ಟು ಬಯಲಿಗೆ ಬರುತ್ತಿದ್ದು ಸಂತ್ರಸ್ತರು ತಾವಾಗೆ ಬಂದು ಪ್ರಜ್ವಲ್​ ರೇವಣ್ಣ ವಿರುದ್ದ ದೂರು ದಾಖಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES