Friday, May 17, 2024

ಹಸೆಮಣೆ ಏರಬೇಕಿದ್ದ ಯುವತಿ ಶವ ಬೆಡ್ ರೂಮ್​ನಲ್ಲಿ ಪತ್ತೆ

ರಾಯಚೂರು : ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳ ಶವ ಅನುಮಾನಾಸ್ಪದವಾಗಿ ಬೆಡ್ ರೂಮ್‍ನಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರಿನ ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ನಡೆದಿದೆ.

ಸುನೀತಾ (26) ಮೃತ ಯುವತಿ ಎಂದು ತಿಳಿದುಬಂದಿದೆ. ಸ್ಟ್ಯಾಬಿಂಗ್ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಮನೆಯವರು ಹೇಳಿದ್ದಾರೆ. ಆದರೆ, ಮೃತ ಯುವತಿ ದೇಹದ‌ ಮೇಲೆ ಚಾಕುವಿನಿಂದ ಹಲ್ಲೆಯಾದ ಗುರುತು ಪತ್ತೆಯಾಗಿದೆ.

ಇತ್ತೀಚೆಗೆ ಮೃತ ಯುವತಿ ಸುನೀತಾಳ ನಿಶ್ಚಿತಾರ್ಥವಾಗಿತ್ತು. ಒಲ್ಲದ ಮನಸ್ಸಿನಿಂದ ಯುವತಿ ಮದುವೆಗೆ ಒಪ್ಪಿಕೊಂಡಿದ್ದಳು. ಮನೆಯವರ ಮದುವೆ ಪ್ರಸ್ತಾಪಕ್ಕೆ ಯುವತಿ ಮನನೊಂದಿದ್ದಳು. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಮನೆ ಬಿಟ್ಟು ಹೋಗಿದ್ದಳಂತೆ. ಮದುವೆ ಪ್ರಸ್ತಾಪದಿಂದ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದಳು ಎಂದು ತಿಳಿದು ಬಂದಿದೆ.

ಇದೇ ಕಾರಣಕ್ಕೆ ಏಪ್ರಿಲ್ 26 ರಂದು ರಾತ್ರಿ ಚಾಕುವಿನಿಂದ ಚುಚ್ಚಿಕೊಂಡು ಮೃತಪ್ಟಿದ್ದಾಳೆ ಎಂದು ತಾಯಿ ಹಾಗೂ ಆಕೆಯ ಅಣ್ಣ ಹೇಳಿಕೆ ನೀಡಿದ್ದಾರೆ. ಯುವತಿಯ ಶವ ಬಡ್ ರೂಮ್‍ನಲ್ಲಿ ರಕ್ತ ಸಿಕ್ತವಾಗಿ ಪತ್ತೆಯಾಗಿದ್ದು, ಎದೆ, ಕತ್ತು ಹಾಗೂ ಕಿವಿಯ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಯುವತಿ ದೇಹದ ಮೇಲೆ ಚಾಕುವಿನಿಂದ ಹಲ್ಲೆಯಾದ ಗುರುತುಗಳು ಕಂಡು ಬಂದಿದೆ.

ಯುವತಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಆಕೆಯ ಅಕ್ಕ ದೂರು ದಾಖಲಿಸಿದ್ದಾರೆ. ಈ ಸಂಬಂಧ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES