Friday, May 17, 2024

ಬಂಧನ ಭೀತಿಯಲ್ಲಿ ಹೊಳೆನರಸಿಪುರ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ ರೇವಣ್ಣ

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಾಸನದ ಹೊಳೆ ನರಸೀಪುರದಲ್ಲಿ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗು ಪ್ರಜ್ವಲ್​ ರೇವಣ್ಣ ವಿರುದ್ದ ಎಫ್​ಐಆರ್​ ದಾಖಲಾಗಿದ್ದು ಬಂಧನ ಭೀತಿಯಲ್ಲಿ ಹೊಳೆನರಸೀಪುರದಿಂದ ಮಾಜಿ ಸಚಿವ ರೇವಣ್ಣ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಜ್ವಲ್ ಪೆನ್​ಡ್ರೈವ್​ ಪ್ರಕರಣದ ತನಿಖೆಗೆ ಈಗಾಗಲೇ ಸರ್ಕಾರ ಎಸ್​ಐಟಿ (SIT) ತನಿಖಾ ತಂಡವನ್ನು ರಚಿಸಿದ್ದು ಹೊಳೆನರಸೀಪುರದಲ್ಲೂ FIR ದಾಖಲಾಗಿದೆ. ಬಂಧನ ಭೀತಿಯಲ್ಲಿ ಹೊಳೆನರಸಿಪುರದ ಮನೆಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಹೊಳೆನರಸೀಪುರದ ಐಷಾರಾಮಿ ಬಂಗಲೆಯಲ್ಲಿ ನೀರವ ಮೌನ ಆವರಿಸಿದ್ದು ಕೆಲಸದಾಳುಗಳು, ಪೊಲೀಸ್​ ಸಿಬ್ಬಂದಿ ಮಾತ್ರ ಉಪಸ್ಥಿತರಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ಅಶ್ಲೀಲ ವೀಡಿಯೋ ಪ್ರಕರಣ: ನನ್ನ ಹಾಗು ದೇವೇಗೌಡರ ಹೆಸರು ತರಬೇಡಿ ಎಂದ ಮಾಜಿ ಸಿಎಂ

ಇನ್ನು ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣ ಮಾದ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಹಾಸನದ ಸಂಸದ ಲೊಕಸಭಾ ಚುನಾವಣೆಯಲ್ಲಿ ತಮ್ಮ ಮತಚಲಾಯಿಸಿ ಜರ್ಮನಿಗೆ ತೆರಳಿದ್ದರು.

A1 ರೇವಣ್ಣ, A2 ಪ್ರಜ್ವಲ್​​; FIR ದಾಖಲು :

ಪೆನ್​ಡ್ರೈವ್ ಪ್ರಕರಣ ಸಂಬಂಧ ಮನೆಕೆಲಸದಾಕೆ ನೀಡಿದ ದೂರಿನಡಿಯಲ್ಲಿ ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಜೀವ ಭಯ ಇರುವದರಿಂದ ದೂರು ದಾಖಲಿಸಲು ವಿಳಂಬವಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ A1 ಆರೋಪಿಯಾಗಿ ಹೆಚ್.​ಡಿ. ರೇವಣ್ಣ, A2 ಸ್ಥಾನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಇದ್ದಾರೆ. ಬಿಜಯ್ ಕುಮಾರ್ ಸಿಂಗ್, ಎಡಿಜಿಪಿ ಸಿಐಡಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಈ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡವನ್ನು ಸರ್ಕಾರ ರಚನೆ ಮಾಡಿದೆ.

RELATED ARTICLES

Related Articles

TRENDING ARTICLES