Friday, May 17, 2024

ನೃತ್ಯ ಮಾಡುವಾಗ ಕುಸಿದು ಬಿದ್ದು ಯುವತಿ ಸಾವು : ಇಲ್ಲಿದೆ ಆಘಾತಕಾರಿ ವಿಡಿಯೋ

ಉತ್ತರ ಪ್ರದೇಶ : ಡ್ಯಾನ್ಸ್​ ಮಾಡುವಾಗ ದಿಢೀರನೆ ಕುಸಿದು ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ರಿಮ್ಮಾ ಮೃತ ದುರ್ದೈವಿ. ತನ್ನ ಸಹೋದರಿಯ ಮದುವೆ ಸಂಭ್ರಮದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಶುಕ್ರವಾರ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ಹರಿದಾಡಿದೆ. ರಿಮ್ಮಾ ಎನ್ನುವ ಯುವತಿ ತನ್ನ ಸಹೋದರಿಯ ಮದುವೆ (ಮೆಹಂದಿ) ಸಮಾರಂಭನಲ್ಲಿ ನೃತ್ಯ ಮಾಡುತ್ತಿದ್ದಳು. ಅವರೊಂದಿಗೆ ಕುಟುಂಬಸ್ಥರು ನೃತ್ಯ ಮಾಡುತ್ತಿದ್ದರು. ಸಂತಸದ ಸಂದರ್ಭದಲ್ಲಿ ಹೆಜ್ಜೆ ಹಾಕುತ್ತಿದ್ದ ರಿಮ್ಮಾ ಎದೆಯ ಮೇಲೆ ಕೈಯಿಟ್ಟ ಕೆಲವೇ ಸೆಕೆಂಡ್​ಗಳಲ್ಲಿ ಕುಸಿದು ಬಿದ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಗಣೇಶನ ಮುಂದೆ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಯುವಕ ಸಾವು

ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ರಿಮ್ಮಾ ಅವರು ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

RELATED ARTICLES

Related Articles

TRENDING ARTICLES