Monday, May 20, 2024

ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅದೇಶ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಪ್ರಕರಣ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜೆಡಿಎಸ್​ ಪಕ್ಷದಿಂದ ಪ್ರಜ್ವಲ್​ ರೇವಣ್ಣರನ್ನು ಉಚ್ಚಾಟನೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಹೊರಗಡೆ ಜೆಡಿಎಸ್​ ಪಕ್ಷದ ಹೆಸರೇಳಲು ಹೇಸಿಗೆ ಅನಿಸುತ್ತಿದೆ: ಸಮೃದ್ದಿ ಮಂಜುನಾಥ್​

ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣವನ್ನು ಜನರ ಮುಂದೆ ತಂದು ನಿರಂತರ ಸುದ್ದಿ ಪ್ರಸಾರ ಮಾಡುವ ಮೂಲಕ ಪವರ್ ಟಿವಿ ಹೋರಾಟ ನಡೆಸಿತ್ತು. ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ಪ್ರತಿಕ್ರಿಯೆ

ಇನ್ನು ಈ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ಮುಜುಗರ ಉಂಟಾಗಿದ್ದು ಸ್ವಪಕ್ಷೀಯರಿಂದಲೇ ಪ್ರಜ್ವಲ್ ರೇವಣ್ಣ ಅವರ ಉಚ್ಚಾಟನೆಗೆ ಒತ್ತಡ ಕೇಳಿ ಬಂದ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

ರೇವಣ್ಣ ವಿರುದ್ದ ಕ್ರಮ ಕೈಗೋಳ್ಳುವ ಸಾಧ್ಯತೆ:

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಈಗಾಗಲೇ ಜೆಡಿಎಸ್​ ವರಿಷ್ಟ ಹೆಚ್​.ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಆದೇಶ ಹೊರಡಿಸಿದ್ದು ಇನ್ನು ಪ್ರಕರಣದ ಎ1 ಆರೋಪಿಯಾಗಿರುವ ಹೆಚ್​.ಡಿ ರೇವಣ್ಣ ವಿರುದ್ದವು ಕ್ರಮ ಕೈಗೋಳ್ಳುವ ಸಾಧ್ಯತೆ ಇದೆ ಎಲ್ಲನಾಗಿದೆ.

 

RELATED ARTICLES

Related Articles

TRENDING ARTICLES