Monday, May 20, 2024

ಮಣಿಪುರದ 11 ಮತಗಟ್ಟೆಗಳಲ್ಲಿ ಇಂದು ಮರು ಮತದಾನ

ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಯುತ್ತಿದೆ. ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಈ ಬೂತ್‌ಗಳಲ್ಲಿ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಚುನಾವಣಾ ಆಯೋಗ ಮರು ಮತದಾನಕ್ಕೆ ಆದೇಶಿಸಿತ್ತು.

ಮಣಿಪುರದ ಲೋಕಸಭೆ ಸ್ಥಾನಗಳ 11 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮಣಿಪುರದಲ್ಲಿ ಶೇ.72ರಷ್ಟು ಮತದಾನ ನಡೆದಿತ್ತು. ಬಿಷ್ಣುಪುರ್ ಜಿಲ್ಲೆಯ ಥಮನ್‌ಪೋಕ್ಪಿಯಲ್ಲಿರುವ ಮತಗಟ್ಟೆ ಕೇಂದ್ರದಲ್ಲಿ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದರು. ಆದರೆ, ಈ ದಾಳಿ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮಾಲ್ಡೀವ್ಸ್​ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಭರ್ಜರಿ ಗೆಲುವು

ಹಿಂಸಾಚಾರದ ಘಟನೆಗಳಿಂದಾಗಿ ಚುನಾವಣಾ ಆಯೋಗವು 11 ಬೂತ್‌ಗಳಲ್ಲಿ ಮತದಾನ ಅಸಿಂಧು ಎಂದು ಘೋಷಿಸಿತ್ತು. ಈ ಕ್ಷೇತ್ರಗಳಿಗೆ ಇಂದು ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

RELATED ARTICLES

Related Articles

TRENDING ARTICLES