Saturday, May 4, 2024

‘ಬೆಂಗಳೂರು ಕರಗ’ಕ್ಕೆ ಕ್ಷಣಗಣನೆ : ಕರಗ ಸಾಗುವ ಬೀದಿಗಳಲ್ಲಿ ಟೈಟ್ ಸೆಕ್ಯುರಿಟಿ

ಬೆಂಗಳೂರು : ವಿಶ್ವವಿಖ್ಯಾತ ಕರಗಕ್ಕೆ ಕೌಂಟ್ ಡೌನ್ ಶುರುವಾಗಿದೆ. ಬಿಸಿಲ ಬೇಗೆಯ ನಡುವೆ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸಕ್ಕೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ. ಹಾಗಾದ್ರೆ, ನಾಳೆ ನಡೆಯುವ ಕರಗದ ಮಹೋತ್ಸವದ ಪೂಜಾ ಕಾರ್ಯಕ್ರಮ ಹೇಗಿರಲಿದೆ‌? ಕರಗ ಮೆರವಣಿಗೆಯ ರೂಟ್ ಮ್ಯಾಪ್ ಹೇಗಿದೆ? ಇಲ್ಲಿದೆ ನೋಡಿ ಮಾಹಿತಿ.

ನಗರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯ ಹೆಗ್ಗುರುತಾಗಿರುವ, ಹೂವಿನ ದಂಡೆಯನ್ನ ಹೊತ್ತು ಸಾಗುವ,ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ರಾಜಧಾನಿಗೆ ರಾಜಕಳೆ ಕೊಡುವ ಬೆಂಗಳೂರು ಕರಗ ಮಹೋತ್ಸವ ನಾಳೆ ನಡೆಯಲಿದೆ.

ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಕೂಡ ಕಾತರರಾಗಿದ್ದಾರೆ. ಇದರ ಮಧ್ಯೆ ಕರಗ ಸಾಗುವ ರಸ್ತೆ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ 30ಕ್ಕೂ ಹೆಚ್ಚು ಸಿಸಿಟಿವಿ ಜೊತೆಗೆ, ಮೂರು ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.

ಇನ್ನೂ ನಾಳೆ ಬೆಳಗ್ಗೆಯಿಂದಲ್ಲೇ ಬಳೆ ಶಾಸ್ತ್ರ, ತಾಳಿ ಶಾಸ್ತ್ರ,ಹೂ ಶಾಸ್ತ್ರಗಳು ಜೊತೆಗೆ ಶುರುವಾಗುವ ಪೂಜಾಕಾರ್ಯ ನಾಳೆ ರಾತ್ರಿ 2 ಗಂಟೆಗೆ ಕರಗ ಮೆರವಣಿಗೆ ಹೊರಡಲಿದೆ.ಹಾಗಾದ್ರೆ ಕರಗ ಮೆರವಣಿಗೆಯ ರೂಟ್ ಮ್ಯಾಪ್ ಹೇಗಿದೆ ಅಂತ ನೋಡೋದಾದ್ರೆ.

ಕರಗ ಮೆರವಣಿಗೆಯ ರೂಟ್ ಮ್ಯಾಪ್

  • ರಾತ್ರಿ 2 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ಮೆರವಣಿಗೆ ಆರಂಭ
  • ಕಬ್ಬನ್ ಪೇಟೆಯಿಂದ ಆರಂಭ ರಾಜ ಮಾರ್ಕಟ್ ಸರ್ಕಲ್-ಕೆ.ಆರ್ ಮಾರ್ಕೆಟ್
  • ಆಂಜನೇಯ ದೇವಸ್ಥಾನ ಮೂಲಕ ಗಣೇಶ ದೇವಸ್ಥಾನ ತಲುಪಲಿದೆ
  • ನಂತರ ನಸುಕಿನ 4 ಗಂಟೆ  ಪೋಲೀಸ್ ರೋಡ್ ಮುಖಾಂತರ
  • ಮಸ್ತಾನ್ ಸಾಬ್ ದರ್ಗಾ ತಲುಪಲಿದೆ,ಮೆಜೆಸ್ಟಿಕ್ ನಾ ಅಣ್ಣಮ್ಮ ದೇವಸ್ಥಾನ
  • ಮೈಸೂರ್ ಬ್ಯಾಂಕ್ ಸರ್ಕಲ‌್ ಮುಖಾಂತರ-ಕುಂಬಾರ ಪೇಟೆ
  • ತಿಗಳರ ಪೇಟೆ, ಎಸ್.ಪಿ ರೋಡ್ ದೇವಸ್ಥಾನ ಮುಖಾಂತರ
  • ಮೇಲ್ ಪೇಟೆ ಬಂದು ಬೆ.7-8 ಗಂಟೆಯ ಸುಮಾರಿಗೆ ಧರ್ಮರಾಯ ದೇವಸ್ಥಾನ ತಲುಪಲಿದೆ

ಇನ್ನೂ ರಾತ್ರಿ 2 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ಕರಗ ಮೆರಣಿಗೆ ಆರಂಭವಾಗಿ ರಾಜ ಮಾರ್ಕೆಟ್ ಸರ್ಕಲ್-ಕೆ.ಆರ್ ಮಾರ್ಕೆಟ್ ಮಾರ್ಗವಾಗಿ, ಆಂಜನೇಯ ದೇವಸ್ಥಾನ ಮೂಲಕ ಗಣೇಶ ದೇವಸ್ಥಾನ ತಲುಪಲಿದೆ. ನಂತರ ನಸುಕಿನ 4 ಗಂಟೆ ಪೋಲೀಸ್ ರೋಡ್ ಮುಖಾಂತರ, ಮಸ್ತಾನ್ ಸಾಬ್ ದರ್ಗಾ ತಲುಪಲಿದೆ. ಬಳಿಕ ಮೆಜೆಸ್ಟಿಕ್ ನಾ ಅಣ್ಣಮ್ಮ ದೇವಸ್ಥಾನ ರೂಟ್​ನಲ್ಲಿ ಸಾಗಲಿದೆ.

ಅಲ್ಲಿಂದ ಮೈಸೂರ್ ಬ್ಯಾಂಕ್ ಸರ್ಕಲ‌್ ಮುಖಾಂತರ ಕುಂಬಾರ ಪೇಟೆ, ತಿಗಳರ ಪೇಟೆ, ಎಸ್.ಪಿ ರೋಡ್ ದೇವಸ್ಥಾನ ಮುಖಾಂತರ ಮೇಲ್ಪೇಟೆ ಬಂದು ಬೆಳಗ್ಗೆ 7 ರಿಂದ 8 ಸುಮಾರಿಗೆ ಧರ್ಮರಾಯ ದೇವಸ್ಥಾನ ತಲುಪಲಿದೆ‌.

ಒಟ್ಟಿನಲ್ಲಿ, ವಿಶ್ವವಿಖ್ಯಾತ ಕರಗದಿಂದ ನಾಳೆ ರಾಜಧಾನಿಗೆ ರಾಜಕಳೆ ಸಿಗಲಿದೆ. ಕರಗ ಕಣ್ತುಂಬಿಕೊಳ್ಳಲು ಲಕ್ಷಾಂತರ ಕಣ್ಣುಗಳು ಕಾತರದಿಂದ ಕಾಯ್ತಿವೆ.

RELATED ARTICLES

Related Articles

TRENDING ARTICLES