Friday, May 3, 2024

ರಾಮನವಮಿ ವಿಶೇಷ: ಅಯೋಧ್ಯೆ ರಾಮನ ಹಣೆಯ ಮೇಲೆ ಸೂರ್ಯ ತಿಲಕ

ಅಯೋಧ್ಯ : ರಾಮನವಮಿ ಹಿನ್ನೆಲೆ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷವಾಗಿ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಮಮಂದಿರ ನಿರ್ಮಾಣದ ಬಳಿಕ ಇದು ಮೊದಲ ರಾಮನವಮಿ ಆಗಿದ್ದು, ಇದನ್ನು ಅದ್ಧೂರಿಯಾಗಿ ಆಚರಿಸಲು ಅಯೋಧ್ಯೆ ಸಜ್ಜಾಗಿದೆ.

ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಎಲ್ಲೆಡೆ ತಳಿರು ತೋರಣ ಕಂಗೊಳಿಸುತ್ತಿದ್ದು, ಮಂದಿರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ರಾಮನವಮಿ ಹಿನ್ನೆಲೆ ವಿಶೇಷ ಪೂಜೆ ಕೈಕಂಕರ್ಯಗಳನ್ನು ಮಾಡಲಾಗುತ್ತಿದೆ. ಅಯೋಧ್ಯೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಜನಸಂದಣಿಯ ನಿಯಂತ್ರಣಕ್ಕೆ ಎಲ್ಲಾ ವಿಶೇಷ ದರ್ಶನಗಳ ವ್ಯವಸ್ಥೆ ರದ್ದು ಮಾಡಿದೆ. ಇದಲ್ಲದೇ ವಿಶೇಷ ಪ್ರಸಾದ ವ್ಯವಸ್ಥೆಯೂ ಮಾಡಲಾಗಿದೆ.

ಇದನ್ನೂ ಓದಿ: ರಾಮನವಮಿ ಹಿನ್ನೆಲೆ ಅಯೋಧ್ಯ ರಾಮನ ಹಣೆ ಮೇಲೆ ಸೂರ್ಯ ರಶ್ಮಿ ತಿಲಕ; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ!

ಬೆಳಗ್ಗೆ 3:30 ರಿಂದ ಬಾಲರಾಮನ ದರ್ಶನ ಪ್ರಾರಂಭವಾಗಿದೆ. ಬ್ರಾಹ್ಮೀ ಮುಹೂರ್ತದ 3:30ಕ್ಕೆ ಮಂಗಳಾರತಿ ನಂತರ ಅಭಿಷೇಕ, ಶೃಂಗಾರ ಮತ್ತು ದರ್ಶನ ಸೇರಿ ಮುಂಜಾನೆಯ ಧಾರ್ಮಿಕ ವಿಧಿಗಳು ಪ್ರಾರಂಭವಾಗಿವೆ. ಮುಂಜಾನೆ 5:00 ಗಂಟೆಗೆ ಶೃಂಗಾರ ಆರತಿ ನಂತರ ಪರಿಸ್ಥಿತಿಗೆ ಅನುಗುಣವಾಗಿ ನೈವೇದ್ಯ ಮತ್ತು ಶಯನ ಆರತಿ ವ್ಯವಸ್ಥೆ ಇದ್ದು, ಶಯನ ಆರತಿಯ ನಂತರ ಮಂದಿರ ನಿರ್ಗಮನ ದ್ವಾರದ ಬಳಿ ಪ್ರಸಾದ ವಿನಿಯೋಗವಾಗುತ್ತಿದೆ. ಮಂಗಳಾರತಿಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ದರ್ಶನ ನಡೆಯಲಿದೆ. ನಾಲ್ಕು ಭೋಗ್ ನೈವೇದ್ಯಗಳ ಸಮಯದಲ್ಲಿ ಕೇವಲ ಐದು ನಿಮಿಷಗಳ ಕಾಲ ಪರದೆ ಮುಚ್ಚಲಿದ್ದು, ಬಾಕಿ ಸಮಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.

ಬಾಲರಾಮನ ಹಣೆಗೆ ಸೂರ್ಯರಶ್ಮಿ ತಿಲಕ:
ಇನ್ನು ರಾಮನವಮಿ ದಿನದಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳುತ್ತದೆ. ಇದು ಈ ಬಾರಿಯ ವಿಶೇಷವಾಗಿದೆ. ಈ ವರ್ಷದಿಂದ ಪ್ರತಿ ವರ್ಷ ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲು ವ್ಯವಸ್ಥೆ ಮಾಡಿದೆ.

RELATED ARTICLES

Related Articles

TRENDING ARTICLES