Monday, May 13, 2024

ರಾಮನವಮಿ ಹಿನ್ನೆಲೆ ಅಯೋಧ್ಯ ರಾಮನ ಹಣೆ ಮೇಲೆ ಸೂರ್ಯ ರಶ್ಮಿ ತಿಲಕ; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ!

ಅಯೋಧ್ಯೆ : ನಾಳೆ (ಏ.17) ರಂದು ಶ್ರೀರಾಮನವಮಿ ಹಿನ್ನೆಲೆ ಅಯೋಧ್ಯದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ರಾಮನವಮಿ ಹಿನ್ನೆಲೆ ಅಯೋಧ್ಯ ರಾಮ ಮಂದಿರದಲ್ಲಿರುವ ರಾಮಲಲ್ಲಾನ ಮೂರ್ತಿಯ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸಲಿದ್ದು ಈ ಕಿರಣಗಳು ರಮಲಲ್ಲಾನ ಹಣೆಯಲ್ಲಿ ರಾರಾಜಿಸಲಿದೆ. ಈ ಸೂರ್ಯ ತಿಲಕವು 75 ಮಿ.ಮಿ ಆಕಾರದಲ್ಲಿ ಇರಲಿದೆ.

ಶ್ರೀರಾಮನವಮಿ ಪ್ರಯುಕ್ತ ಸೂರ್ಯ ತಿಲಕದ ಪ್ರಯೋಗವನ್ನು ಈಗಾಗಲೇ ರೂರ್ಕಿಯ ಕೇಂದ್ರೀಯ ಕಟ್ಟದಲ್ಲಿ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ಪೂರ್ಣಗೋಳಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ ತಿಳಿಸಿದೆ.

ಇದನ್ನೂ ಓದಿ: ಏ.17ರಂದು ರಾಜ್ಯಕ್ಕೆ ಆಗಮಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ: ಕೈ ಅಭ್ಯರ್ಥಿಗಳ ಪರ ಪ್ರಚಾರ

ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾನ ಪ್ರತಿಷ್ಟಾಪನೆ ಬಳಿಕ ಇದೇ ಮೊದಲ ಬಾರಿಗೆ ಶ್ರೀರಾಮ ನವಮಿಯನ್ನು ಆಚರಿಸುತ್ತಿದ್ದು, ಈ ದಿನವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ವಿಶೇಷ ಕ್ಷಣಗಳನ್ನು ಮೂರರಿಂದ ನಾಲ್ಕು ಲಕ್ಷ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

ಇನ್ನು, ರಾಮನವಮಿ ದಿನದಂದು ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಬೇಸಿಗೆಯ ಬಿಸಿಲುನ ದಣಿವಾಗದಂತೆ
ದೇವಾಲಯದ ಆವರಣದಲ್ಲಿ 600-800 ಮೀಟರ್ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಯೋಧ್ಯೆಯ ಗಲ್ಲಿಗಲ್ಲಿಗಳಲ್ಲಿ 100ಕ್ಕೂ ಹೆಚ್ಚು ಎಲ್ ಸಿ ಡಿ ಪರದೆ, ರಾಮಮಂದಿರದ ಶೃಂಗಾರ 45 ಕ್ಟಿಂಟಾಲ್ ಹೂಗಳನ್ನು ಬಳಸಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ ವಿವಿಧ ಕಲಾ ತಂಡಗಳಿಂದ ನಾದ ಸ್ವರ ಪಠಣ ನಡೆಯಲಿದೆ ಎಂದು ಟ್ರಸ್ಟ್​ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES