Friday, May 17, 2024

UPSC ಪರೀಕ್ಷೆ ಫಲಿತಾಂಶ ಪ್ರಕಟ : ರಾಜ್ಯದ 15 ಕ್ಕೂ ಹೆಚ್ಚು ಜನರಿಗೆ ರ್ಯಾಂಕ್​!

ನವದೆಹಲಿ : 2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರೀಕ ಸೇವಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಕರ್ನಾಟಕದ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಕರುನಾಡ ಕುಳ್ಳ ದ್ವಾರಕೀಶ್ ನಿಧನ

2023ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗವು 1016 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನಿಸಿತ್ತು, ಇದಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಅಂತಿಮವಾಗಿ ಆದಿತ್ಯಾ ಶ್ರೀವಾಸ್ತವ ಮೊದಲೇ ರ್ಯಾಂಕ್​ ಪಡೆದರೆ, ಅನಿಮೇಶ್​ ಪ್ರಧಾನ್​ ದ್ವಿತೀಯ ರ್ಯಾಂಕ್​, ದೋರೂರು ಅನನ್ಯ ರೆಡ್ಡಿ ಮೂರನೇ ರ್ಯಾಂಕ್​ ಪಡೆದಿದ್ದಾರೆ.

ಕರ್ನಾಟಕದಿಂದ 15ಕ್ಕು ಹೆಚ್ಚು ಮಂದಿ ಯುಪಿಎಸ್​ಸಿ ಪರೀಕ್ಷೆ ಬರೆದು ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ. ಧಾರವಾಡ ಮೂಲದ ಸೌಭಾಗ್ಯ 105ನೇ ರ್ಯಾಂಕ್, ಭಾನುಪ್ರಕಾಶ್​ ಗೆ 600ನೇ ರ್ಯಾಂಕ್​, ಭರತ್​.ಸಿ ಗೆ 667ನೇ ರ್ಯಾಂಕ್​ ಬಂದಿದೆ. ಇನ್ನು, ಬೆಂಗಳೂರಿನಲ್ಲಿ ಪಿಎಸ್​ಐ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್​ 644ನೇ ರ್ಯಾಂಕ್​ ಪಡೆಯುವ ಮೂಲಕ ದೇಶದ ಅತ್ಯನ್ನತ ನಾಗರೀಕ ಸೇವೆ ಸಲ್ಲಿಸಲು.

RELATED ARTICLES

Related Articles

TRENDING ARTICLES