Friday, May 17, 2024

ಡಿ.ಕೆ. ಶಿವಕುಮಾರ್ ಯಾವಾಗ ಒಕ್ಕಲಿಗ ಲೀಡರ್ ಆದ್ರು? : ಆರ್. ಅಶೋಕ್

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಯಾವಾಗ ಒಕ್ಕಲಿಗ ಲೀಡರ್ ಆದ್ರು..? ಡಿ.ಕೆ. ಶಿವಕುಮಾರ್ ಒಕ್ಕಲಿಗರಿಗೆ ಏನು ಮಾಡಿದ್ದಾರೆ..? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿ ವರದಿ ತೆಗೆದುಕೊಂಡಿದೆ. ಆವಾಗ ಡಿ.ಕೆ. ಶಿವಕುಮಾರ್ ಏನು ಮಾಡುತ್ತಿದ್ರು..? ಎಂದು ಕುಟುಕಿದ್ದಾರೆ.

ಜನಗಣತಿ ವರದಿ ಪಡೆಯುವಾಗ ಸುಮ್ಮನೆ ಆಗಿದ್ರು. ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ರಿಸೈನ್ ಮಾಡಿದ್ಯಾ..? ಒಕ್ಕಲಿಗ ಸಮುದಾಯಕ್ಕೆ ರಿಸೈನ್ ಮಾಡಬೇಕಿತ್ತು. ಡಿ.ಕೆ. ಶಿವಕುಮಾರ್ ಕನಕಪುರಕಷ್ಟೇ ಲೀಡರ್. ಕನಕಪುರದಿಂದ ಹೊರಗಡೆ ಬಂದ್ರೆ ಡಿ.ಕೆ. ಶಿವಕುಮಾರ್ ಲೀಡರ್ ಅಲ್ಲ ಎಂದು ಹರಿಹಾಯ್ದಿದ್ದಾರೆ.

ನಾನು 10 ವರ್ಷದ ಹಿಂದೆನೇ ಡಿಸಿಎಂ

ಒಕ್ಕಲಿಗ ಲೀಡರ್‌ಗಳು ಹೆಚ್ಚಾಗಿ ಇರುವುದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಮಾತ್ರವೇ. ನಮ್ಮಲ್ಲಿ ಒಕ್ಕಲಿಗ ನಾಯಕರುಗಳಿಗೆ ಸಾಕಷ್ಟು ಸ್ಥಾನಮಾನ ಸಿಕ್ಕಿದೆ. ನಿನ್ನೆ ಮೊನ್ನೆ ಉಪಮುಖ್ಯಮಂತ್ರಿ ಆದವರು‌ ಡಿ.ಕೆ ಶಿವಕುಮಾರ್. ಆದರೆ, ನಾನು 10 ವರ್ಷದ ಹಿಂದೆನೇ ಡಿಸಿಎಂ ಆಗಿದ್ದೇನೆ ಎಂದು ಡಿಕೆಶಿ ವಿರುದ್ಧ ಆರ್​. ಅಶೋಕ್ ವಾಗ್ದಾಳಿ  ನಡೆಸಿದ್ದಾರೆ.

RELATED ARTICLES

Related Articles

TRENDING ARTICLES