Monday, May 13, 2024

11 ಕೆಜಿ ಚಿನ್ನ, 30 ಕೆಜಿ ಬೆಳ್ಳಿ, 54 ಕೋಟಿಯ ಮನೆ : ಶಿವಣ್ಣ ಪತ್ನಿ ಗೀತಾ ಕೋಟಿ ಕುಳ

ಬೆಂಗಳೂರು : 11 ಕೆಜಿ ಚಿನ್ನ, 54 ಕೋಟಿ ಮೌಲ್ಯದ ಮನೆ, 1 ಕೋಟಿ ರೂ.ನ ಕಾರು. ಶಿವಣ್ಣನ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕೋಟಿ ಕುಳ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಅಫಿಡವಿಟ್‌ನಲ್ಲಿ ಬರೋಬ್ಬರಿ 40.04 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

ಪತಿ ಶಿವರಾಜ್‌ ಕುಮಾರ್‌ ಬಳಿ 49 ಕೋಟಿ ರೂ. ಆಸ್ತಿ ಇದೆ. ಒಟ್ಟಾರೆ ಪತಿ ಹಾಗೂ ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇದೆ. 2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಇದೆ. ಪತಿ ಆದಾಯ 2.97 ಕೋಟಿ ರೂ. ತಮ್ಮ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದು ಗೀತಾ ಮಾಹಿತಿ ನೀಡಿದ್ದಾರೆ.

ಗೀತಾ ಕೈಯಲ್ಲಿ 2 ಲಕ್ಷ ರೂ. ನಗದು ಹಣವಿದೆ. ಶಿವರಾಜ್‌ ಕುಮಾರ್ ಕೈಯಲ್ಲಿ 22 ಲಕ್ಷ ರೂ. ನಗದು ಇದೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಪತಿ ಹಾಗೂ ಪತ್ನಿ ಕೋಟ್ಯಂತರ ರೂ. ಠೇವಣಿ ಹೊಂದಿದ್ದಾರೆ. ಮುತ್ತು ಸಿನಿ ಸರ್ವೀಸಸ್‌ಗೆ ಗೀತಾ ಶಿವರಾಜ್‌ ಕುಮಾರ್‌ 25.60 ಲಕ್ಷ ರೂ. ಸಾಲ ನೀಡಿದ್ದರೆ, ಶಿವರಾಜ್‌ ಕುಮಾರ್‌ 1.64 ಕೋಟಿ ರೂ. ಸಾಲ ನೀಡಿದ್ದಾರೆ. ಗೀತಾ ಪಿಕ್ಚರ್ಸ್‌ಗೆ ಶಿವಣ್ಣ 6 ಕೋಟಿ ರೂ. ಸಾಲ ನೀಡಿದ್ದರೆ, ಇತರರಿಗೆ 2.13 ಕೋಟಿ ರೂ. ಕೈ ಸಾಲ ನೀಡಿದ್ದಾರೆ.

11 ಕೆಜಿ ತೂಕದ ಚಿನ್ನ, 30 ಕೆಜಿ ಬೆಳ್ಳಿ

ಗೀತಾ ಬಳಿಯಲ್ಲಿ 1.07 ಕೋಟಿ ರೂ. ಮೊತ್ತದ ಟೊಯೋಟಾ ಹೈಬ್ರಿಡ್‌ ಕಾರಿದ್ದರೆ, ಶಿವಣ್ಣ ಬಳಿಯಲ್ಲಿ ಟೊಯೋಟಾ ಫಾರ್ಚುನರ್‌, ಮಾರುತಿ ಎರ್ಟಿಗಾ ಹಾಗೂ ವೋಲ್ವೋ ಎಸ್‌90 ಕಾರಿದೆ. ಇವುಗಳ ಮೌಲ್ಯ 87.70 ಲಕ್ಷ. ಗೀತಾ ಅವರ ಬಳಿಯಲ್ಲಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. 30 ಕೆಜಿ ಬೆಳ್ಳಿಯೂ ಅವರ ಬಳಿ ಇದೆ ಎಂದು ಗೀತಾ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.

54 ಕೋಟಿ ರೂ. ಮೌಲ್ಯದ ಮನೆ

ಗೀತಾ ಹಾಗೂ ಶಿವರಾಜ್ ಕುಮಾರ್‌ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಇದೆ. ಇದರ ಮೌಲ್ಯ ಒಟ್ಟು 3 ಕೋಟಿ ರೂಪಾಯಿ. ಮಾನ್ಯತಾ ರೆಸಿಡೆನ್ಸಿಯಲ್ಲಿ 1.48 ಎಕರೆಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮನೆ ಹೊಂದಿದ್ದಾರೆ. ಇದರ ಮೌಲ್ಯ 54 ಕೋಟಿ ರೂ. ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES