Monday, May 13, 2024

ಮ್ಯಾಟ್ರಮೋನಿ ಸೈಟ್​ನಲ್ಲಿ ವರನ ಹುಡುಕಾಟದಲ್ಲಿದ್ದ ಮಹಿಳೆಗೆ ವಂಚನೆ: ಆರೋಪಿ ಬಂಧನ

ಬೆಂಗಳೂರು : ಮ್ಯಾಟ್ರಿಮೋನಿ ವೆಬ್​ ಸೈಟ್​ನಲ್ಲಿ ವರನ ಹುಡುಕಾಟದಲ್ಲಿ ತೊಡಗಿದ ಮಹಿಳೆಯರನ್ನು ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಜೆಪಿ ನಗರ ಪೊಲೀಸರು ಬಂಧಸಿದ್ದಾರೆ.

ದೀಪಕ್​ ಬಂಧಿತ ಆರೋಪಿ, ಮ್ಯಾಟ್ರಿಮೋನಿ ಸೈಟ್​ನಲ್ಲಿ ಪ್ರೊಫೈಲ್​ ಕ್ರಿಯೇಟ್​ ಮಾಡಿರುವ ಆರೋಪಿ ದೀಪಕ್,​ ತಾನೊಬ್ಬ ಬ್ಯಾಂಕ್​ ಉದ್ಯೋಗಿ ಎಂದು ಹೇಳಿಕೊಂಡು ಹಲವು ಮಹಿಳೆಯರನ್ನು ವಂಚಿಸುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾಗಿದ್ದಾನೆ.

ಇದನ್ನೂ ಓದಿ : ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದ ಮನೆ

ಘಟನೆ ಹಿನ್ನೆಲೆ:

ಬೆಂಗಳೂರಿನ ಜೆಪಿ ನಗರದ 41 ವರ್ಷ ವಯಸ್ಸಿನ ಮಹಿಳೆಯೊಬ್ಬರು ವರನನ್ನು ಹುಡುಕುತ್ತಿರುವಾಗ ಮ್ಯಾಟ್ರಿಮೋನಿ ಸೈಟ್​ನಲ್ಲಿ ದೀಪಕ್​ ಎಂಬ ವ್ಯಕ್ತಿ ಪರಿಚಯವಾಗಿದೆ, ಈ ವೇಳೆ ತಾನೋಬ್ಬ ಬ್ಯಾಂಕ್​ ಉದ್ಯೋಗಿಯಾಗಿದ್ದು ಮದುರೈನಲ್ಲಿ ಕೆಲಸಮಾಡುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಾನೆ. ಇಬ್ಬರು ವಾಟ್ಸಾಪ್​ ಮೂಲಕ ತಮ್ಮ ತಮ್ಮ ಫೋಟೋಗಳನ್ನು ಕಳಿಸಿಕೊಂಡು ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆಯಾವುದ ಬಗ್ಗೆ ನಿರ್ಧರಿಸಿದ್ದಾರೆ. ಈ ನಡುವೆ ದೀಪಕ್​ ಬ್ಯಾಂಕ್ ಸಿಮ್​ ಕಾರ್ಡ್​ ನಿಂದ ಮಾತನಾಡಲು ಆಗುವುದಿಲ್ಲ ಆದ್ದರಿಂದ ನಿನ್ನ ಹೆಸರಿನಲ್ಲಿ ಹೊಸ ಸಿಮ್​ ಖರೀದಿಸಿ ತಾನು ಕಳಿಸಿವ ಆಫೀಸ್​ ಬಾಯ್ ಗೆ ಕೊಟ್ಟು ಕಳಿಸು ಎಂದು ಹೇಳಿದ್ದಾನೆ. ಅದರಂತೆ ಆಕೆ ಸಿಮ್ ಕಾರ್ಡ್​ ಖರೀದಿಸಿ ಕೊಟ್ಟು ಕಳಿಸಿದ್ದಾಳೆ.

ಮಾರ್ಚ್​ 3. ರಂದು ಮಹಿಳೆಗೆ ಕರೆ ಮಾಡಿದ ದೀಪಕ್​, ತನ್ನ ವ್ಯಾಲೆಟ್​ ಕಳೆದು ಹೋಗಿದ್ದು ನನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ. ಕೂಡಲೇ ಮಹಿಳೆ ಫೋನ್ ಪೇ ಮೂಲಕ 30 ಸಾವಿರು ರೂ. ಹಣವನ್ನು ದೀಪಕ್​ ಗೆ ಕಳಿಸಿದ್ದಾಳೆ. ಬಳಿಕ ತಾನೂ ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದು ಸಿಮ್ ಕಾರ್ಡ್​ನ್ನು ಬ್ಲಾಕ್​ ಮಾಡಿಸಿದ ಮಹಿಳೆ ದೀಪಕ್ ವಿರುದ್ದ ಜೆಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ದೀಪಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES