Saturday, May 18, 2024

270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಿಲಾಡಿ ಲೇಡಿ : 1.36 ಲಕ್ಷ ದಂಡ ಕಕ್ಕಿಸಿದ ಖಾಕಿ

ಬೆಂಗಳೂರು : ಈ ಲೇಡಿ ಹೆಲ್ಮೆಟ್ ಹಾಕಲ್ಲ. ಸಿಗ್ನಲ್​ನಲ್ಲಿ ನಿಲ್ಲಲ್ಲ. ಒನ್ ವೇ ಲೆಕ್ಕಕ್ಕೇ ಇಲ್ಲ. ಹೀಗೆ, ಒಂದಲ್ಲ, ಎರಡಲ್ಲ ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್​ ಮಾಡಿದ್ದಾಳೆ ಕಿಲಾಡಿ ಲೇಡಿ!

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ. ಮಹಿಳೆಯ ಕಿಲಾಡಿತನ ಸಂಚಾರಿ ​ಪೊಲೀಸರ ಕಣ್ಣಿಗೆ ಬಿದ್ದಿದೆ. ಮಾಡಿದ ತಪ್ಪಿಗೆ ಮಹಿಳೆಯಿಂದ 1.36 ಲಕ್ಷ ದಂಡ ಕಕ್ಕಿಸಿದ್ದಾರೆ ಪೊಲೀಸರು.

KA03 JE5705 ನಂಬರ್​​ನ ಆ್ಯಕ್ಟೀವಾ ಬೈಕ್​​ ಮೇಲೆ ಈ ಮಹಿಳೆ ಸುತ್ತಾಡಿದ್ದಾರೆ. ಹೆಲ್ಮೆಟ್​​ ಹಾಕದೆ, ಮೊಬೈಲ್​ನಲ್ಲಿ ಮಾತನಾಡುತ್ತಾ ಓಡಾಡಿದ್ದಾರೆ. ಅಲ್ಲದೆ, ಟ್ರಾಫಿಕ್ ಪೊಲೀಸರಿಗೆ ಯಾಮಾರಿಸಲು ಈ ಲೇಡಿ ನಂಬರ್ ಪ್ಲೇಟ್ ಮರೆಮಾಚಿ ಸುತ್ತಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಬೆಂಗಳೂರಿನ ಸುಧಾಮನಗರದಲ್ಲಿ ಸಂಚಾರ ನಿಮಯ ಬ್ರೇಕ್​ ಮಾಡಿದ್ದನ್ನು ಸಾರ್ವಜನಿಕರು ಫೋಟೋ ತೆಗೆದು ಎಕ್ಸ್​ ಖಾತೆಯಲ್ಲಿ ಫೋಸ್ಟ್​ ಮಾಡಿದ್ದರು. ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ, ದಂಡ ವಸೂಲಿ ಮಾಡುವಂತೆ ಮನವಿ ಮಾಡಿದ್ದರು.

ಕ್ಯಾಮೆರಾದಲ್ಲಿ ಲೇಡಿ ನಿಜಬಣ್ಣ ಬಯಲು

ಈ ಪೋಸ್ಟ್​ ಕಂಡ ಪೊಲೀಸರು ಸಿಗ್ನಲ್​ಗಳಲ್ಲಿ ಅಳವಡಿಸಿದ್ದ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ಆಗ ಈ ಚಾಲಾಕಿ ಲೇಡಿಯ ನಿಜಬಣ್ಣ ಬಯಲಾಗಿದೆ. ಸಂಚರಿಸುವ ಈ ಮಹಿಳೆ 270 ಬಾರಿ ಸಂಚಾರಿ ನಿಯಮ ಬ್ರೇಕ್‌‌ ಮಾಡಿರುವುದು ಖಾಕಿ ಕಣ್ಣಿಗೆ ಬಿದ್ದಿದೆ. ಈ ರೀತಿ 270 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಮಹಿಳೆಗೆ ಪೊಲೀಸರು 1,36,000 ಸಾವಿರ ದಂಡ ವಿಧಿಸಿದ್ದಾರೆ.

RELATED ARTICLES

Related Articles

TRENDING ARTICLES