Monday, May 13, 2024

ಬಿಸಿಲ ಬೇಗೆಗೆ ತಂಪೆರೆದ ವರುಣ : ಕೊಡಗಿನ ಭಾಗಮಂಡಲ, ನೆಲಜಿ, ಕಾರಗುಂದದಲ್ಲಿ ಉತ್ತಮ ಮಳೆ

ಬೆಂಗಳೂರು : ಇಡೀ ರಾಜ್ಯವೇ ಬಿಸಲ ಬೇಗೆಯಿಂದ ಬಸವಳಿದಿದೆ. ಈ ನಡುವೆಯೇ ಕೊಡಗು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಚೇರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ, ಎಮ್ಮೆಮಾಡು, ನೆಲಜಿ, ಬಲ್ಲಾಮಾವಟಿ, ಕಾರುಗುಂದ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ಇನ್ನು ಬೆಳಗಾವಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸುರಿದಿದೆ. ಖಾನಾಪುರ ತಾಲ್ಲೂಕಿನ ಬೀಡಿ, ಹಿಂಡಲಗಿ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲೂ ಮಳೆಯಾಗಿದೆ. ಬಿಸಿಲ ಝಳದಿಂದ ಬಸವಳಿದಿರುವ ಜನರಿಗೆ ಮಳೆರಾಯ ಸ್ವಲ್ಪ ನೆಮ್ಮದಿ ತಂದಿದ್ದಾನೆ.

ಎರಡು ದಿನ ಮಳೆ ಸಾಧ್ಯತೆ

ಇಂದಿನಿಂದ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಾವಣಗೆರೆ, ತುಮಕೂರು, ಬಾಗಲಕೋಟೆ, ಬೀದರ್, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಾಳೆಯೂ ಮಳೆಯಾಗಲಿದೆ

ನಾಳೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಬೇದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾಗಮಂಡಲದಲ್ಲಿ ವರ್ಷದ ಮೊದಲ ಮಳೆ

ಎಮ್ಮೆಮಾಡುವಿನಲ್ಲಿ ಉತ್ತಮ ಮಳೆ

ಕಾರುಗುಂದದಲ್ಲಿ ವರ್ಷದ ಮೊದಲ ಮಳೆ

ಬಲ್ಲಾಮಾವಟಿಯಲ್ಲಿ ಸುರಿದ ಮಳೆ

RELATED ARTICLES

Related Articles

TRENDING ARTICLES