Monday, May 20, 2024

ರಾಮಮಂದಿರ ಸ್ಥಾಪನೆ ಬಳಿಕ ದೇಶದಲ್ಲಿ ಧರ್ಮ ಜಾಗೃತಿಯ ಪರ್ವ ಆರಂಭವಾಗಿದೆ : ಪೇಜಾವರ ಶ್ರೀ

ವಿಜಯನಗರ : ರಾಮಮಂದಿರ ಸ್ಥಾಪನೆಯ ಬಳಿಕ ದೇಶದಲ್ಲಿ ಧರ್ಮ ಜಾಗೃತಿಯ ಪರ್ವ ಆರಂಭವಾಗಿದೆ ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಪೀಠಾಧಿಪತಿ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿರುವ ಅವರು, ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದಾದರೆ ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಮ ಒಬ್ಬ ರಾಜನಾಗಿದ್ದ, ಸದ್ಯ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕು. ರಾಮಮಂದಿರ ನಿರ್ಮಾಣವಾದ ಮೇಲೆ ದೇಶದೆಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರ್ಮಿಕತೆ ಕಡೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ರಾಮಮಂದಿರ ಆಯ್ತು.. ಕಾಶಿ, ಮಥುರಾನೂ ಹಿಂದೂಗಳ ಕೈಗೆ ಬರುತ್ತೆ : ಅನಂತಕುಮಾರ್ ಹೆಗಡೆ

ಧರ್ಮ ಕ್ಷೇತ್ರಗಳ ಅಭಿವೃದ್ಧಿ, ಶುದ್ಧೀಕರಣಕ್ಕೆ ಅಣಿ

ರಾಮಮಂದಿರ ಲೋಕಾರ್ಪಣೆ ಬಳಿಕ ದೇಶದಲ್ಲಿ ಧರ್ಮ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಶುದ್ಧೀಕರಣಕ್ಕೆ ಅಣಿಯಾಗಿದೆ. ಉತ್ತಮ ಚಾರಿತ್ರ್ಯ ನಾವು ಬೆಳಸಿಕೊಳ್ಳಬೇಕು. ಇತರರು ಉತ್ತಮ ಕಾರ್ಯ ನಿರ್ವಹಣೆಗೆ ಪ್ರೇರಣೆ ನೀಡುವ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ವಿಶ್ವ ಪ್ರಸನ್ನತೀರ್ಥ ಶ್ರೀಗಳು ಅಭಿಪ್ರಾಯಪಟ್ಟರು.

RELATED ARTICLES

Related Articles

TRENDING ARTICLES