Sunday, September 8, 2024

Bengaluru Central Lok Sabha Survey : ಬೆಂಗಳೂರು ಸೆಂಟ್ರಲ್​​​ನಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರ

ಕ್ಷೇತ್ರ: ಬೆಂಗಳೂರು ಸೆಂಟ್ರಲ್

ಹಾಲಿ ಸಂಸದ: ಪಿ.ಸಿ. ಮೋಹನ್

=======================

ಬಿಜೆಪಿ ಅಭ್ಯರ್ಥಿ  : ಪಿ.ಸಿ. ಮೋಹನ್

ಕಾಂಗ್ರೆಸ್​ ಅಭ್ಯರ್ಥಿ : ಮನ್ಸೂರ್​ ಅಲಿಖಾನ್​

2019 ಬಲಾಬಲ  :

ಪಿ.ಸಿ. ಮೋಹನ್ :  ಬಿಜೆಪಿ :  6,02,853 : ಶೇ. 50.35

ರಿಜ್ವಾನ್ ಅರ್ಷದ್ :  ಕಾಂಗ್ರೆಸ್ :  5,31,885 : ಶೇ. 44.43

ಪ್ರಕಾಶ್ ರಾಜ್ :  ಪಕ್ಷೇತರ : 28,906 : ಶೇ. 02.41

ಚಲಾವಣೆಯಾದ ಒಟ್ಟು ಮತಗಳು : 11,97,687 : ಶೇ. 54.32

ಪಿ.ಸಿ. ಮೋಹನ್    ಗೆಲುವಿನ ಅಂತರ  70,968 :  ಶೇ. 05.92

ಮತದಾರರ ವಿವಿರ

ಪುರುಷರು : 12,36,897

ಮಹಿಳೆಯರು : 11,61,548

ಒಟ್ಟು ಮತದಾರರು : 23,98,910

(ತೃತೀಯ ಲಿಂಗಿಗಳು : 465)

ಬಿಜೆಪಿ ಪ್ಲಸ್ :

ಸತತ 3 ಬಾರಿ ಗೆದ್ದು ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಪಿ.ಸಿ. ಮೋಹನ್

ಸತತ ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಅಲೆ ಪ್ರಬಲ

ಕ್ಷೇತ್ರದಲ್ಲಿ ಬಿಜೆಪಿ ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಇರುವುದು

ಬಿಜೆಪಿ ಮೈನಸ್ :

ಅಸೆಂಬ್ಲಿ ಎಲೆಕ್ಷನ್ ವೇಳೆ ಬಿಜೆಪಿಗೆ ಭಾರಿ ಹಿನ್ನಡೆ ಆಗಿರುವುದು

ಸಂಸದರು ಯಾವುದೇ ಮಹತ್ವದ ಯೋಜನೆ ಜಾರಿಗೆ ತಂದಿಲ್ಲ ಎಂಬ ಆರೋಪ

ಕಾಂಗ್ರೆಸ್ ಪ್ಲಸ್ :

ಕ್ಷೇತ್ರದ ವ್ಯಾಪ್ತಿಯಲ್ಲಿ 3 ಸಚಿವರೂ ಸೇರಿ 5 ಕಾಂಗ್ರೆಸ್ ಶಾಸಕರು

ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಿದ್ದು

ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತಗಳು ಇರುವುದು ವರದಾನ

ಕಾಂಗ್ರೆಸ್ ಮೈನಸ್ :

ಕಾಂಗ್ರೆಸ್ ಮುಖಂಡರ ಮಧ್ಯೆ ಇರುವ ಭಿನ್ನಾಭಿಪ್ರಾಯ, ವೈಮನಸ್ಸು

ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕ್ಷೇತ್ರಾದ್ಯಂತ ಪರಿಚಯ ಇಲ್ಲದಿರುವುದು

ಗ್ಯಾರಂಟಿ ನೆಪದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳ ಜಾರಿಯಿಲ್ಲ

ಪವರ್​ ಟಿವಿ ಸರ್ವೆ ರಿಸಲ್ಟ್​ :

ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೆಂಟ್ರಲ್​​​ನಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ?  ಪಿ.ಸಿ.ಮೋಹನ್​​​ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಮನ್ಸೂರ್? ಮತ್ತೆ ಗೆಲುವಿನ ಪತಾಕೆ ಹಾರಿಸ್ತಾರಾ ಸಂಸದ ಪಿ.ಸಿ.ಮೋಹನ್? ಇವೆಲ್ಲದಕ್ಕೂ ಉತ್ತರ ಇಲ್ಲಿದೆ.

ಬೆಂ.ಸೆಂಟ್ರಲ್ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7444

ಪುರುಷ ಮತದಾರರಿಂದ 7050, ಮಹಿಳಾ ಮತದಾರರಿಂದ 394 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3761, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3683

ಬೆಂಗಳೂರು ಸೆಂಟ್ರಲ್​​​ನಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 51%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 49%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿ​​ಗೆ 78 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

ಬೆಂ.ಸೆಂಟ್ರಲ್​​ ಫೈಟ್​ನಲ್ಲಿ ಮತ್ತೆ ಬಿಜೆಪಿಯತ್ತ ಜನರ ಒಲವು

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಬಿಜೆಪಿಗೆ ಮುನ್ನಡೆ

ಮತ್ತೊಮ್ಮೆ ಸಂಸದರಾಗುವತ್ತ ಪಿ.ಸಿ.ಮೋಹನ್  ದಾಪುಗಾಲು

ಈ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ

ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿದ ಸಂದೇಶ.

RELATED ARTICLES

Related Articles

TRENDING ARTICLES