Friday, May 17, 2024

ಗೆದ್ದ ಹೈದರಾಬಾದ್, ಬಿದ್ದ ಮುಂಬೈ : ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ 2ನೇ ಸೋಲು

ಬೆಂಗಳೂರು : ಬೆಂಕಿ ಬ್ಯಾಟಿಂಗ್.. RCB ದಾಖಲೆ ಧೂಳಿಪಟ.. ಹೊಸ ಇತಿಹಾಸ ಸೃಷ್ಟಿ.. 5 ಬಾರಿಯ ಚಾಂಪಿಯನ್ ಮುಂಬೈಗೆ ಹೀನಾಯ ಸೋಲು.

ಸನ್​ರೈಸರ್ಸ್ ಹೈದರಾಬಾದ್ ತವರಿನಲ್ಲಿ ಅಬ್ಬರಿಸಿದ್ದು, 5 ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿರುವ ಮುಂಬೈ ಇಂಡಿಯನ್ಸ್​ ತಂಡವನ್ನು 31 ರನ್​ಗಳಿಂದ ಸೋಲಿಸಿತು.

ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದೇ ಮುಂಬೈಗೆ ಮುಳುವಾಯಿತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ಮುಂಬೈ ವಿರುದ್ಧ ಐತಿಹಾಸಿಕ ದಾಖಲೆ ನಿರ್ಮಿಸಿತು.

ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್​ ಗಳಿಸುವ ಮೂಲಕ RCB ದಾಖಲೆಯನ್ನು ಮುರಿಯಿತು. 2013ರಲ್ಲಿ RCB 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಈ ದಾಖಲೆಯನ್ನು ಹೈದರಾಬಾದ್ ಅಳಿಸಿ ಹಾಕಿತು.

ಹೋರಾಟ ನಡೆಸಿ ಮುಂಬೈ

278 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 246 ರನ್​ ಗಳಿಸಲಷ್ಟೇ ಶಕ್ತವಾಯಿತು. ತಿಲಕ್ ವರ್ಮಾ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಕೊನೆಯ ಎಸೆತದ ವರೆಗೂ ಹೋರಾಡಿದ ಮುಂಬೈ, ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.

ತಿಲಕ್ ವರ್ಮಾ, ಡೇವಿಡ್ ಅಬ್ಬರ

ಮುಂಬೈ ಇಂಡಿಯನ್ಸ್​ ಪರ ರೋಹಿತ್​ ಶರ್ಮಾ 26 ರನ್​, ಇಶಾನ್​ ಕಿಶನ್​ 13 ಎಸೆತದಲ್ಲಿ 34 ರನ್​, ನಮನ್​ ಧೀರ್​ 14 ಎಸೆತದಲ್ಲಿ 30 ರನ್, ತಿಲಕ್​ ವರ್ಮಾ 34 ಎಸೆತದಲ್ಲಿ 6 ಸಿಕ್ಸ್​ ಮತ್ತು 2 ಬೌಂಡರಿ ಮೂಲಕ 64 ರನ್​ ಸಿಡಿಸಿದರು. ನಾಯಕ ಹಾರ್ದಿಕ್​ ಪಾಂಡ್ಯ 24 ರನ್, ಟೀಮ್​ ಡೇವಿಡ್​​ 42 ರನ್​ ಸಿಡಿಸಿದರು.

RELATED ARTICLES

Related Articles

TRENDING ARTICLES