Friday, May 17, 2024

ಬೆಳಗಾವಿ ನನ್ನ ಕರ್ಮಭೂಮಿ, ನಾನು ಒಳಗಿನವನೇ.. : ಶೆಟ್ಟರ್ ಟಕ್ಕರ್

ಬೆಳಗಾವಿ : ‘ಬೆಳಗಾವಿ ನನ್ನ ಕರ್ಮಭೂಮಿ’ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಹೊರಗಿನವನು ಎಂಬ ಅಸ್ತ್ರ ಪ್ರಯೋಗಿಸಿದವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸನ್ಮಾನ ಮತ್ತು ಗೌರವ ಕೊಟ್ಟಿದ್ದಾರೆ. ಇದು ಒಂದು ಗೆಲುವಿಗೆ ಸಾಕ್ಷಿ. ಇಲ್ಲಿ ಬಿಜೆಪಿ ಗೆಲವನ್ನು ಸಾಧಿಸುತ್ತೆ. ಅದೇ ರೀತಿ ಹೆಚ್ಚು ಮತಗಳಿಂದ ಗೆದ್ದು ಬರುತ್ತೆ ಎಂದರು.

ಜಗದೀಶ್ ಶೆಟ್ಟರ್ ಹೊರಗಿನವರು, ಇಲ್ಲಿಯವರು ಅಲ್ಲ ಅಂತಾರೆ. ಕಾಂಗ್ರೆಸ್​ನವರಿಗೆ ಬಿಜೆಪಿ ವಿರುದ್ಧ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ, ಹೊರಗಿನವರು, ಒಳಗಿನವರು ಅಂತ ಹೇಳತ್ತಾರೆ ಎಂದು ಕುಟುಕಿದರು.

ನಾನು ಹೊರಗಿನವನಲ್ಲ, ಒಳಗಿನವನೇ

ನಾನು ಹೊರಗಿನವನಲ್ಲ, ನಾನು ಒಳಗಿನವನೇ. ಬೆಳಗಾವಿ ನನ್ನ ಕರ್ಮಭೂಮಿ. ನಾನು ವಿರೋಧ ಪಕ್ಷದ ನಾಯಕನಾಗಿ 10 ವರ್ಷ ಕೆಲಸ ಮಾಡಿದ್ದೇನೆ. ಅಷ್ಟೇ ಅಲ್ಲ.. ನಾನು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಸಮಸ್ಯೆ ಕುರಿತು ಸುವರ್ಣಸೌಧವನ್ನ ಕಟ್ಟುವ ಕೆಲಸದಲ್ಲಿ ಅಡಿಪಾಯ ಹಾಕಿ ಉದ್ಘಾಟನೆ ಮಾಡುವ ಕೆಲಸ ಮಾಡಿದ್ದೇನೆ ಎಂದು ವಿರೋಧಿಗಳಿಗೆ ಜಗದೀಶ್ ಶೆಟ್ಟರ್ ಚಾಟಿ ಬೀಸಿದರು.

ಶೆಟ್ಟರ್​ಗೆ ಯಡಿಯೂರಪ್ಪ ಸಾಥ್

ಬೆಳಗಾವಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರೋಚಕ ತಿರುವುಪಡೆದುಕೊಳ್ಳುತ್ತಿದೆ. ಇಂದು ಬಿಜೆಪಿ ಅಧಿಕೃತ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಧಿಕೃತವಾಗಿ ಅಖಾಡಕ್ಕೆ ಇಳಿದರು. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಾಥ್ ಕೊಟ್ಟರು. ಬೆಳಗಾವಿ ಕೋಟೆಕೇರೆಯ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಬೈಕ್ ರ್ಯಾಲಿಯಲ್ಲಿ ಭಾಗಿಯಾದರು. ನಗರದ ಚನ್ನಮ್ಮ ಪುತ್ಥಳಿ, ಅಂಬೇಡ್ಕರ್, ಚತ್ರಪತಿ ಶಿವಾಜಿ, ಜಗಜ್ಯೋತಿ ಬಸವಣ್ಣನಿಗೆ ಪುತಳಿಗೆ ಮಾಲಾರ್ಪಣೆ ಮಾಡಿದರು.

RELATED ARTICLES

Related Articles

TRENDING ARTICLES