Saturday, May 4, 2024

ಗೆದ್ದ ಗಿಲ್, ಬಿದ್ದ ಪಾಂಡ್ಯ.. ಹಾರ್ದಿಕ್ ಪಾಂಡ್ಯಗೆ ಸೋಲಿನ ಸ್ವಾಗತ

ಬೆಂಗಳೂರು : ಗೆದ್ದ ಗಿಲ್.. ಮುಗ್ಗರಿಸಿದ ಪಾಂಡ್ಯ.. ಗುಜರಾತ್ ನಾಯಕತ್ವ ವಹಿಸಿಕೊಂಡ ಶುಭ್​ಮನ್ ಗಿಲ್ ಗೆಲುವಿನೊಂದಿಗೆ ಐಪಿಎಲ್​ನಲ್ಲಿ ಶುಭಾರಂಭ ಮಾಡಿದರು. ಇತ್ತ, ಗುಜರಾತ್ ಬಿಟ್ಟು ಮುಂಬೈ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಸೋಲಿನ ಖಾತೆ ತೆರೆದರು.

ಮುಂಬೈ ಇಂಡಿಯನ್ಸ್​ ವಿರುದ್ಧ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ರನ್​ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಗುಜರಾತ್ ನಾಯಕತ್ವ ತ್ಯಜಿಸಿ ಮುಂಬೈ ನಾಯಕತ್ವ ವಹಿಸಿಕೊಂಡ ಪಾಂಡ್ಯಗೆ ಸೋಲಿನ ಸ್ವಾಗತ ಲಭಿಸಿತು.

ಟಾಸ್ ಸೋತ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್​ ಕಲೆಹಾಕಿತು. 169 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಮುಂಬೈ 20 ಓವರ್​ಗಳಲ್ಲಿ 162 ರನ್​ ಗಳಿಸಲಷ್ಟೇ ಶಕ್ತವಾಯಿತು. ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಗುಜರಾತ್ ಗೆಲುವಿನ ನಗೆ ಬೀರಿತು.

ಬ್ಯಾಟಿಂಗ್​ನಲ್ಲೂ ಹಾರ್ದಿಕ್ ವೈಫಲ್ಯ

ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಸೊನ್ನೆ ಸುತ್ತಿದರೆ, ರೋಹಿತ್ ಶರ್ಮಾ 43, ಬ್ರೇವಿಸ್ 46, ನಮನ್ 20, ತಿಲಕ್ ವರ್ಮಾ 25 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 11 ರನ್​ ಗಳಿಸಿ ನಿರಾಸೆ ಮೂಡಿಸಿದರು. ಗುಜರಾತ್ ಪರ ಉಮೇಶ್ ಯಾದವ್, ಜಾನ್ಸನ್, ಅಜ್ಮತುಲ್ಲಾ ಒಮರ್ಜಾಯ್ ಹಾಗೂ ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದರು. ಸಾಯಿ ಸುದರ್ಶನ್​ (45) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

RELATED ARTICLES

Related Articles

TRENDING ARTICLES