Saturday, May 18, 2024

ವರುಣಾದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದೆ, ಆಗ ಹೈಕಮಾಂಡ್ ಒಪ್ಪಲಿಲ್ಲ : ಸತ್ಯ ಬಿಚ್ಚಿಟ್ಟ ವಿಜಯೇಂದ್ರ

ಬೆಂಗಳೂರು : ಹಿಂದೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೆ. ಆಗ ಹೈಕಮಾಂಡ್ ಸ್ಪರ್ಧೆ ಮಾಡಲು ಒಪ್ಪಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬ ರಾಜಕಾರಣದ ಬಗ್ಗೆ ಸ್ಪಷ್ಟನೆ ನೀಡ್ತೀನಿ. ನನ್ನ ಆಯ್ಕೆ ಹೈಕಮಾಂಡ್ ನಿರ್ಧಾರ ಎಂದು ಹೇಳಿದರು.

ನಾನು ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೆ. ಆಗ ಹೈಕಮಾಂಡ್ ಸ್ಪರ್ಧೆ ಮಾಡಲು ಒಪ್ಪಲಿಲ್ಲ. ಬೊಮ್ಮಾಯಿ ಅವರು ಸಿಎಂ‌ ಆಗಿದ್ದಾಗ ನನ್ನ ವಿಧಾನಪರಿಷತ್ ಸದಸ್ಯ ಮಾಡಲು ಕೋರ್ ಕಮಿಟಿ ತೀರ್ಮಾನ ಮಾಡಿತು. ಆದ್ರೆ, ಅದಕ್ಕೂ ಹೈಕಮಾಂಡ್ ಒಪ್ಪಲಿಲ್ಲ. ಪಕ್ಷದ ತೀರ್ಮಾನ ಅಂತ ನಾನೂ ಒಪ್ಪಿಕೊಂಡೆ ಎಂದು ತಿಳಿಸಿದರು.

ನನಗೆ ಹೇಳಲು ಸಂಕೋಚವೂ ಇಲ್ಲ

ನಮ್ಮ‌ ರಾಷ್ಟ್ರೀಯ ಅಧ್ಯಕ್ಷರು ವಿಜಯೇಂದ್ರ ಅವರನ್ನು ಆಯ್ಕೆ ಯಾಕೆ ಮಾಡಿದ್ದೇವೆ ಅಂತ‌ ತಿಳಿಸಿದ್ದಾರೆ. ಬಹಳ ಸ್ಪಷ್ಟವಾಗಿ ಹೇಳ್ತೀನಿ, ಕುಟುಂಬ ರಾಜಕಾರಣ ಇಲ್ಲ. ನನಗೆ ಹೇಳಲು ಸಂಕೋಚವೂ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಇದಕ್ಕೆ ಪ್ರಧಾನಿ ‌ಮೋದಿ ಅವರ ಜನಪ್ರಿಯತೆ ಕಾರಣ ಎಂದು ಹೇಳಿದರು.

ಬಿಜೆಪಿಯಿಂದ ಮೀಡಿಯಾ ಸೆಂಟರ್ ಓಪನ್

2024ರ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಮಾಧ್ಯಮ ಕೇಂದ್ರ ಯಾಕೆ ಅಂತ ಪ್ರಶ್ನೆ ಬರಬಹುದು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದೆ. ಮಾಧ್ಯಮರಂಗಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ನಾಲ್ಕನೇ ಅಂಗ ಅಂತಲೂ ಕರೆಸಿಕೊಂಡಿದೆ. ಬಿಜೆಪಿ ಇಂದ ಮೀಡಿಯಾ ಸೆಂಟರ್ ತೆರೆಯಲಾಗಿದೆ. ಸುದ್ದಿ ಪ್ರಸಾರ ಆಗಬೇಕು, ಅನುವು ಆಗಬೇಕು. ಎಲ್ಲಾ ಮೂಲಭೂತ ಸೌಕರ್ಯ ಇರುವ ಕೇಂದ್ರ ಉದ್ಘಾಟನೆ ಮಾಡಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

RELATED ARTICLES

Related Articles

TRENDING ARTICLES