Friday, May 3, 2024

ಅರವಿಂದ್ ಕೇಜ್ರಿವಾಲ್ ಅಬಕಾರಿ ಹಗರಣದ ಕಿಂಗ್ ಪಿನ್ : 28 ಪುಟಗಳ ‌ವರದಿ ಸಲ್ಲಿಕೆ

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಬಕಾರಿ ಹಗರಣದ ಕಿಂಗ್ ಪಿನ್. ಅಬಕಾರಿ ನೀತಿ ರೂಪಿಸುವಲ್ಲಿ ಕೇಜ್ರಿವಾಲ್‌ ಪಾತ್ರವಿದೆ ಎಂದು ಇಡಿ ಅಧಿಕಾರಿಗಳು ಸುಮಾರು 28 ಪುಟಗಳ ‌ವರದಿ ಸಲ್ಲಿಕೆ ಮಾಡಿದ್ದಾರೆ.

ಸಹ ಆರೋಪಿ ಕವಿತಾ ಹೇಳಿಕೆಯನ್ನ ಈಗಾಗಲೇ ಪಡೆಯಲಾಗಿದೆ. ಅಬಕಾರಿ ನೀತಿ ರೂಪಿಸುವ ಸಂದರ್ಭದಲ್ಲಿ ಸಿಸೋಡಿಯಾ ಮತ್ತು ಅಧಿಕಾರಿ ಸಿಎಂ ಮನೆಯಲ್ಲಿ ಇದ್ದರು ಎಂದು ಇಡಿ ಹೇಳಿದೆ.

ಪ್ರಮುಖ ಆರೋಪಿ ಅಧಿಕಾರಿ ವಿಜಯ್ ನಾಯರ್ ಸಿಎಂಗಾಗಿ ಕೆಲಸ ಮಾಡುತ್ತಿದ್ದರು. ಸೌತ್ ಗ್ರೂಪ್​ನ ಮಧ್ಯವರ್ತಿಯಾಗಿ ವಿಜಯ್ ನಾಯರ್ ಕೆಲಸ ಮಾಡುತ್ತಿದ್ದರು. ಸಿಎಂ ಅರವಿಂದ್ ಕೇಜ್ರಿವಾಲ್ ಸೌತ್ ಗ್ರೂಪ್​ನಿಂದ ಕಿಕ್ ಬ್ಯಾಕ್ ಕೇಳಿದ್ದಾರೆ ಎಂದು ತಿಳಿಸಿದೆ.

ಹವಾಲಾ ಹಣದ ಮೂಲಕ 45 ಕೋಟಿ

ಕಿಕ್ ಬ್ಯಾಕ್ ಹಿನ್ನಲೆ ಎರಡು ಬಾರಿ ಹಣ ವರ್ಗಾವಣೆಯಾಗಿದೆ. ಸಿಎಂ ಕಿಕ್ ಬ್ಯಾಕ್ ಕೇಳಿರುವುದು ಹಲವರ ಹೇಳಿಕೆಯಿಂದ ಸಾಬೀತಾಗಿದೆ. ಹವಾಲಾ ಹಣದ ಮೂಲಕ 45 ಕೋಟಿ ಸಾಗಿಸಲಾಗಿದೆ. ಗೋವಾಗೆ ಹಣವನ್ನ ಹವಾಲಾದ ಮೂಲದ ವರ್ಗಾವಣೆ ಮಾಡಲಾಗಿದೆ. ಜೊತೆಗೆ 6.5 ಮತ್ತು 5.5 ಲಕ್ಷ ಹಣವನ್ನ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳಿಂದ ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES