Friday, May 3, 2024

ಸಿದ್ದರಾಮಯ್ಯ ಹಾಗೂ ಡಿಕೆಶಿ ಫೋಟೋ ಇದ್ದ 73 ಕುಕ್ಕರ್ ವಶ

ತುಮಕೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಫೋಟೋ ಇರುವ 73 ಕುಕ್ಕರ್​ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್​ನ ಮಲ್ಲಿಪಾಳ್ಯದ ಕಾಂಗ್ರೆಸ್ ಪುರಸಭಾ ಸದಸ್ಯ ನಾಗೇಂದ್ರ ಅವರಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.

ಕುಕ್ಕರ್ ಬಾಕ್ಸ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಂಸದ, ಶಾಸಕರ ಭಾವಚಿತ್ರಗಳಿವೆ. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕುಕ್ಕರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಮತದಾರರಿಗೆ ಹಂಚಲು ಕುಕ್ಕರ್‌ ಸಂಗ್ರಹ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ಆಮೀಷ ಒಡ್ಡುತ್ತಿದ್ದಾರೆ. ಅದರಂತೆಯೇ ಕುಣಿಗಲ್‍ನಲ್ಲಿ ಮತದಾರರಿಗೆ ಹಂಚಲು ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಲಾಗಿತ್ತು.

ಕುಣಿಗಲ್​ನಲ್ಲಿಯೂ ಕುಕ್ಕರ್ ಪಾಲಿಟಿಕ್ಸ್

ಕುಣಿಗಲ್ ತಾಲ್ಲೂಕು ಸಂಸದ ಡಿ.ಕೆ. ಸುರೇಶ್ ಅವರು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈಗಾಗಲೇ ರಾಮನಗರದಲ್ಲಿಯೂ ಮತದಾರರಿಗೆ ಕುಕ್ಕರ್ ಹಾಗೂ ಸೀರೆ ಹಂಚುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಇದೀಗ, ಕುಣಿಗಲ್​ನಲ್ಲಿಯೂ ಕುಕ್ಕರ್ ಪಾಲಿಟಿಕ್ಸ್ ಮುಂದುವರಿದಿದೆ.

RELATED ARTICLES

Related Articles

TRENDING ARTICLES