Monday, May 13, 2024

Love Affair : ಲವರ್ ಜೊತೆಗಿದ್ದ ಮಗಳನ್ನು ಕತ್ತು ಹಿಸುಕಿ ಕೊಂದ ತಾಯಿ

ಹೈದರಾಬಾದ್‌ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ತನ್ನ ಲವರ್ ಜೊತೆ ಇರುವುದನ್ನು ಪ್ರತ್ಯಕ್ಷವಾಗಿ ಕಂಡ ತಾಯಿ, ಕೋಪದ ಕೈಗೆ ಬುದ್ಧಿ ಕೊಟ್ಟು ಮಗಳನ್ನೇ ಮಸಣಕ್ಕೆ ಕಳುಹಿಸಿದ್ದಾಳೆ.

ಹೈದರಾಬಾದ್‌ನ ಇಬ್ರಾಹಿಂಪಟ್ಟಣದಲ್ಲಿ ಈ ಘಟನೆ ನಡೆದಿದೆ. ಭಾರ್ಗವಿ (19) ಮೃತ ಮಗಳು. ಜಂಗಮ್ಮ ಮಗಳನ್ನೇ ಕೊಂದ ತಾಯಿ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ಭಾರ್ಗವಿ ತನ್ನ ಲವರ್​ನೊಂದಿಗೆ ಇದ್ದಳು. ಇದನ್ನು ತಾಯಿ ಜಂಗಮ್ಮ ಪ್ರತ್ಯಕ್ಷವಾಗಿ ನೋಡಿದ್ದರು. ಇದರಿಂದ ಕುಪಿತಳಾಗಿ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಬೆಳಗ್ಗೆ ತಾಯಿ ಜಂಗಮ್ಮ ಕೆಲಸಕ್ಕೆ ಹೋಗಿದ್ದಳು. ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಮಗಳು ತನ್ನ ಲವರ್​ನ ಜೊತೆಯಲ್ಲಿದ್ದಳು. ಜಂಗಮ್ಮ ಆ ಹುಡುಗನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಬಳಿಕ, ಮಗಳಿಗೆ ಹೊಡೆದಿದ್ದಲ್ಲದೇ, ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ವಿರುದ್ಧ ಮಗನಿಂದಲೇ ದೂರು

ಜಂಗಮ್ಮ ಕೊಲೆ ಮಾಡಿರುವುದನ್ನು ಸ್ವತಃ ಅವರ ಮಗ ನೋಡಿದ್ದಾನೆ. ಅಮ್ಮ ಅಕ್ಕನನ್ನು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದು ತಾಯಿ ಜಂಗಮ್ಮ ವಿರುದ್ಧ ಇಬ್ರಾಹಿಂಪಟ್ಟಣ ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ.

ಮಗಳ ಮದುವೆಗೆ ಸಿದ್ದತೆ ನಡೆಸಿದ್ದ ತಾಯಿ

ಆರೋಪಿ ಜಂಗಮ್ಮ ಮೃತ ಭಾರ್ಗವಿಗೆ ಮದುವೆ ಮಾಡಬೇಕು ಅಂತ ಯೋಚಿಸಿದ್ದಳು. ಆದರೆ, ಮಗಳನ್ನು ಲವರ್ ಜೊತೆ ಈ ರೀತಿ ಕಂಡು ಕೋಪದಲ್ಲಿ ಹತ್ಯೆ ಮಾಡಿದ್ದಾಳೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES