Friday, May 17, 2024

ಲೌಡ್ ಸ್ಪೀಕರ್​ನಲ್ಲಿ ಅರಚುವುದು ಸಂವಿಧಾನದತ್ತ ಹಕ್ಕು ಅಲ್ಲ : ಶಾಸಕ ಯತ್ನಾಳ್

ವಿಜಯಪುರ : ಲೌಡ್ ಸ್ಪೀಕರ್​ನಲ್ಲಿ ಅರಚುವುದು ಸಂವಿಧಾನದತ್ತ ಹಕ್ಕು ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನ್ಯಾಯಾಲಯದ ಆದೇಶದಂತೆ ಲೌಡ್ ಸ್ಪೀಕರ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಸಂಸ್ಥೆಗಳ ಮೇಲಿರುವ ಲೌಡ್ ಸ್ಪೀಕರ್ ತೆರವುಗೊಳಿಸಬೇಕು. ಪ್ರಾರ್ಥನೆ ಸಂವಿಧಾನದತ್ತ ಹಕ್ಕು, ಲೌಡ್ ಸ್ಪೀಕರ್ ನಲ್ಲಿ ಅರಚುವುದು ಸಂವಿಧಾನದತ್ತ ಹಕ್ಕು ಅಲ್ಲ. ನೆಮ್ಮದಿಯಿಂದ ಬದಕುವ ಹಕ್ಕು ಈ ರಾಷ್ಟ್ರದ ಜನತೆಗೆ ಸಂವಿಧಾನ ನೀಡಿದೆ ಎಂದು ತಿಳಿಸಿದ್ದಾರೆ.

ಮಸೀದಿಯಲ್ಲಿರುವ ಸ್ಪೀಕರ್ ತೆರವುಗೊಳಿಸಿ

ವಕ್ಫ್ ಬೋರ್ಡ್ ಅನ್ನು ನಿಷೇಧಿಸಬೇಕು ಎನ್ನುವುದು ಹಿಂದೂಗಳ ಬೇಡಿಕೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು. ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕಾಲೇಜಿಮ್ ವ್ಯವಸ್ಥೆಯನ್ನು ಕೊನೆಗೊಳ್ಳಿಸಬೇಕು. ಮಸೀದಿಯಲ್ಲಿರುವ ಸ್ಪೀಕರ್​ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಿ

ಸರ್ಕಾರದ ನಿಯಂತ್ರಣದಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಬೇಕು. ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತದ ಬೋಧನೆಯನ್ನು ಕಡ್ಡಾಯಗೊಳಿಸಬೇಕು. ಭಾರತ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವರ OCI ಕಾರ್ಡ್ ಅನ್ನು ನಿಷೇದಗೊಳಿಸಬೇಕು. ಭ್ರಷ್ಟಾಚಾರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಎಂದು ಯತ್ನಾಳ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES