Friday, May 17, 2024

ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ: ಲಕ್ಷ್ಮಣ್ ಸವದಿ

ಬೆಂಗಳೂರು: ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ ಎಂದು ಲಕ್ಷ್ಮಣ್ ಸವದಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಮತ್ತು ಶೆಟ್ಟರ್ ಅವರು ಬಿಜೆಪಿ ಬಿಡುವಾಗ ಮಾಧ್ಯಮಗಳ ಮುಂದೆ ಕೆಲ ಮಾತುಗಳನ್ನು ಹೇಳಿದ್ವಿ ಪಕ್ಷ ಬಿಡಬಾರದಾಗಿತ್ತು.ಪಕ್ಷ ಎಲ್ಲವೂ ಕೊಟ್ಟಿದೆ ಎಂದು ಅವರ ಅಭಿಪ್ರಾಯ ಹೇಳಿದ್ದರು.ನಾನು ಸಹ ಅ ಸಂದರ್ಭದಲ್ಲಿ ಹೇಳಿದ್ದೆ ಈಶ್ವರಪ್ಪ ಅವರು ಹಿರಿಯ ನಾಯಕರು ಲೋಕಸಭೆ ಚುನಾವಣೆ ಘೋಷಣೆ ಆಗಿ, ಅಭ್ಯರ್ಥಿಗಳು ಘೋಷಣೆ ಆದ ಮೇಲೆ ಈಶ್ವರಪ್ಪನವರು ಏನು ಹೇಳುತ್ತಾರೆ ಎನ್ನುವುದರ ಮೇಲೆ ತೀರ್ಮಾನ ಮಾಡೋಣ ಎಂದಿದ್ದೆ‌. ನಾನು ಹೇಳಿದ್ದು ಇವತ್ತು ಸತ್ಯವಾಗಿದೆ ಎಂದರು.

ಬಿಜೆಪಿಯಲ್ಲಿ ಹಿರಿತನ, ಸಂಘಟನೆ ಇರುವವರು, ಪಕ್ಷ ಬಲ ತರುವವರ ಅವಶ್ಯಕತೆ ಅವರಿಗಿಲ್ಲ.ಯಾವ ಆಲೋಚನೆ ಮಾಡ್ತಾ ಇದ್ದಾರೆ ಚರ್ಚೆ ಮಾಡೋದು ಅನಾವಶ್ಯಕ.ಒಟ್ಟಾರೆ ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ ಎಮದು ಕಿಡಿಕಾರಿದ್ದರು.

ಜೆಪಿಯ ವಿನಾಶದ ಕಾಲ 8 9 ತಿಂಗಳ ಹಿಂದೆ ಶುರುವಾಗಿದೆ

ನಮಗೆ ತಟ್ಟಿ ಬಿಸಿ ಈಶ್ವರಪ್ಪ ಅವರಿಗೆ ತಟ್ಟಿದರೆ ಅರ್ಥ ಆಗಲಿದೆ ಎಂದು ಹೇಳಿದ್ದೆ‌.ಈಗ ಈಶ್ವರಪ್ಪ ಅವರಿಗೆ ಬಿಸಿ ತಟ್ಟಿದೆ ಅರ್ಥವಾಗಿದೆ ಅವರಿಗೆ ಹಾಗಾಗಿ ಸತ್ಯ ಸಂಗತಿಗಳನ್ನು ಹೊರ ಹಾಕುತ್ತಿದ್ದಾರೆ.ಯಾವುದಕ್ಕೆ ಆಗಲಿ ಒಂದು ಆಯುಷ್ಯ ಅಂತ ಇರುತ್ತೆ ಅದು ತಿರುಲಿಕೆ ಪ್ರಾರಂಭ ಆದ ಮೇಲೆ ಏನಾದರೂ ಒಂದು ದಾರಿ ಹುಡುಕುತ್ತೆ ವಿನಾಶಕಾಲೇ ವಿಪರೀತ ಬುದ್ಧಿ ಎಂದು ಹೇಳುತ್ತಾರಲ್ಲಾ‌.ತಾನು ಹಾಳಾಗುವ ಕಾಲಕ್ಕೆ ಅಂತಹ ನಿರ್ಣಯಗಳನ್ನು ಮಾಡಿಸುತ್ತದೆ ಅದು ನಿಸರ್ಗದ ನಿಯಮ ಕರ್ನಾಟಕದಲ್ಲಿ ಬಿಜೆಪಿಯ ವಿನಾಶದ ಕಾಲ 8 9 ತಿಂಗಳ ಹಿಂದೆ ಶುರುವಾಗಿದೆ ಈಗ ಅದು ನಿಧಾನಕ್ಕೆ ಬೆಳಕಿಗೆ ಬರುತ್ತಿದೆ ಎಂದರು.

ಲೋಕಸಭೆ ಚುನಾವಣೆ ಬಳಿಕ ನೋಡಿ ಮೋದಿಯವರು ಪ್ರಧಾನ ಮಂತ್ರಿ ಆಗಲಿ ಎಂದು ನಾವು ಸುಮ್ಮನಿದ್ದೇವೆ. ಆಮೇಲೆ ಇವರಿಗೆ ಬುದ್ಧಿ ಕಲಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ ಈಗ ಒನ್ ಬೈ ಒನ್ ಶುರುವಾಗಿದೆ ಇನ್ನು ಜನ ಇನ್ನೂ ಕೆಲವರ್ ಕ್ಯೂ ಅಲ್ಲಿದ್ದರು. ಈಶ್ವರಪ್ಪನವರನ್ನ ತಳ್ಳಿದ್ರು ಸದಾನಂದ ಗೌಡರನ್ನು ತಳ್ಳಿದ್ರು ಇನ್ನೂ ಕೆಲ ನಂಬರ್ ಗಳಿದ್ದಾವೆ ಅವರೆಲ್ಲ ಖುಷಿಗಳಿದ್ದಾರೆನಮಗೇನಿಲ್ಲ ಎಲ್ಲವೂ ಬೇರೆಯವರಿಗೆ ಎಂಬ ರೀತಿಯಲ್ಲಿ ಖುಷಿಯಾಗಿದ್ದಾರೆ ಅವರ ನಂಬರ್ ಬಂದಾಗ ಗೊತ್ತಾಗಲಿದೆ ಎಂದು ಹೇಳಿದ್ದರು.

ಯಾವ ಕುರಿಯನ್ನ ಎಲ್ಲಿ ನಿಲ್ಲಿಸಬೇಕು ಎಲ್ಲಿ ಬಲಿ ಕೊಡಬೇಕು ಎಂಬ ಪ್ಲಾನ್​ ಇದೆ

ಜಗದೀಶ್ ಶೆಟ್ಟರ್ ಅವರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಯಾವ ಕುರಿಯನ್ನ ಎಲ್ಲಿ ನಿಲ್ಲಿಸಬೇಕು ಎಲ್ಲಿ ಬಲಿ ಕೊಡಬೇಕು ಎಂದು ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಿದ್ದಾರೆ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟ ಹಾಗೇನು ಆಗಬೇಕು ಪಾರ್ಲಿಮೆಂಟಿಗೆ ಹೋಗದಂತೆನೂ ಆಗಬೇಕು ಪಾರ್ಲಿಮೆಂಟ್ ಗೆ ಹೋದವರು ಮಂತ್ರಿ ಆಗಬೇಕು ಎಂದು ಪ್ಲ್ಯಾನ್ ಆಗಿದೆ ಜಗದೀಶ್ ಶೆಟ್ಟರ್ ಅವರಿಗೆ ಎಲ್ಲವೂ ಗೊತ್ತಿದೆ ಚುನಾವಣೆ ಬಳಿಕ ಮಾತನಾಡುತ್ತಾರೆ ಏಕಾಏಕಿಯಾಗಿ ಬಿಜೆಪಿ ಸೇರಿದ್ದರು ಏಕಾಏಕಿಯಾಗಿ ಅಭ್ಯರ್ಥಿಯಾದರು ಏಕಾಏಕಿಯಾಗಿ ಸೋಲುತ್ತಾರೆ ಎಂದರು.

RELATED ARTICLES

Related Articles

TRENDING ARTICLES