Sunday, September 8, 2024

420ಗಳೇ 400 ದಾಟುತ್ತೇವೆ ಅಂತಾರೆ, ಯಾವುದು ಮೋದಿ ಪರಿವಾರ? : ನಟ ಪ್ರಕಾಶ್ ರಾಜ್

ಮಂಗಳೂರು : 420ಗಳೇ ಯಾವಾಗಲೂ ಈ ಬಾರಿ ನಾವು 400 ಸೀಟು ದಾಟುತ್ತೇವೆ ಅಂತ ಹೇಳ್ತಾರೆ. ಏನು ಇದು ಅಹಂಕಾರ ಅಲ್ವಾ? ನೀವು ಯಾರ್ರೀ ಅದನ್ನು ಹೇಳೋಕೆ ಎಂದು ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಇರೋದು ಯಾಕೆ? ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ? ಆಗಿಲ್ಲ. ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕೊಂಡು ಬರ್ತೀರಿ. ಸಾವಿರಾರು ರೂ. ಕೋಟಿ ಹಣ ಇದೆಯಂತ ಧೈರ್ಯಾನಾ? ಎಂದರು ಪ್ರಶ್ನಿಸಿದರು.

ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ಧೈರ್ಯನಾ? ಧರ್ಮವನ್ನು ದುರುಪಯೋಗ ಪಡಿಸಿ, ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ಮನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ಮೋದಿ ಪರಿವಾರದ ವಿರುದ್ಧ ಕಿಡಿಕಾರಿದರು.

2 ರೂ. ಕಡಿಮೆ ಮಾಡಿದ್ರಲ್ಲಿ ಅರ್ಥ ಇದ್ಯಾ?

ಇವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟ್ರಿ ಮಾರುವ ಮಾರ್ಟಿನ್ ಇವರ ಪರಿವಾರ. ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ, ಮಹಿಳಾ ದಿನದಂದು ಗ್ಯಾಸ್​ಗೆ 100 ರೂ. ಕಡಿಮೆ ಮಾಡ್ತಾರೆ. 2 ರೂ. ಪೆಟ್ರೋಲ್ ದರ ಕಡಿಮೆ ಮಾಡಿದ್ರಲ್ಲಿ ಅರ್ಥ ಇದೆಯಾ? ಎಂದು ಕುಟುಕಿದರು.

ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು

ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿಯಂತೆ, ನಮಗೆ ಸೊನ್ನೆ ಎಷ್ಟು ಅಂತ ಗೊತ್ತಾಗಲ್ಲ, ಚುನಾವಣೆ ಗೆಲ್ಲೋಕೆ ಬಾಂಡ್ ಮಾಡಿದ್ದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ, ನಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ. ಮಹಾಪ್ರಭುವುಗಳೇ ಇಂಟರ್ ನೆಟ್ ನ ಒಂದು ಜಿಬಿ ಹತ್ತು ರೂ. ಅದು ನೀವು ಮಾಡಿದ್ದಾ? ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಬದಲಾಗುತ್ತೆ. ಎಲ್ಲವನ್ನೂ ಸುಳ್ಳು ಹೇಳ್ಕಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು ಎಂದು ಪ್ರಕಾಶ್ ರಾಜ್ ಟೀಕಿಸಿದರು.

RELATED ARTICLES

Related Articles

TRENDING ARTICLES